ಅಕ್ಕನೊಂದಿಗೆ ಮೊಬೈಲ್​ಗಾಗಿ ಕಿತ್ತಾಡಿದ ಬಾಲಕ ಕೊನೆಗೆ ಏನು ಮಾಡಿದ ಗೊತ್ತೇ?

mobile
Published on

ತಿರುಪತಿ: ಅಕ್ಕನೊಂದಿಗೆ ಮೊಬೈಲ್​ಫೋನ್​ಗಾಗಿ ಕಿತ್ತಾಡಿದ ಬಾಲಕನೊಬ್ಬ, ಅಪ್ಪ ಬೈದರೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೋರ್ನಕಂಬಲ ಗ್ರಾಮದ ಮುನಿ ತೇಜ (13) ಆತ್ಮಹತ್ಯೆ ಮಾಡಿಕೊಂಡವ.

ಮುನಿ ತೇಜನಿಗೆ ಮೊಬೈಲ್​ಫೋನ್​ ಖರೀದಿಸಿಕೊಡಲು ತಂದೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಕನ ಬಳಿ ಇದ್ದ ಮೊಬೈಲ್​ಫೋನ್​ ಕೊಡುವಂತೆ ಕೇಳಿದ್ದ. ಆದರೆ, ಅಕ್ಕ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಆತ ಅಕ್ಕನೊಂದಿಗೆ ಬುಧವಾರ ಬೆಳಗ್ಗೆ ಜಗಳ ಮಾಡುತ್ತಿದ್ದ.
ವಿಷಯ ತಿಳಿದ ಆತನ ತಂದೆ ಜಗಳವಾಡದಂತೆ ಆತನಿಗೆ ಬುದ್ಧಿ ಹೇಳಿ ಕೆಲಸಕ್ಕೆ ತೆರಳಿದ್ದರು. ಇದರಿಂದ ನೊಂದ ಬಾಲಕ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಮಧ್ಯಾಹ್ನವಾದರೂ ಆತ ಹೊರಬರದಿದ್ದಾಗ ಅನುಮಾನಗೊಂಡ ಮನೆಯವರು ಕೋಣೆಯ ಬಾಗಿಲು ಮುರಿದು ಒಳಹೋದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಯಿತು.

ಕುಣಿಕೆ ಬಿಚ್ಚಿ, ಆತನನ್ನು ಇಳಿಸುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಈ ಬಗ್ಗೆ ಚಂದ್ರಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net