ಬಾಲಕನಿಂದ ಯೂಟ್ಯೂಬ್ ವಿಡಿಯೋಗಳ ಅನುಕರಣೆ: ಕೋಣೆಯೊಳಗಿನ ದೃಶ್ಯ ನೋಡಿ ಆಘಾತಕ್ಕೊಳಗಾದ ಪಾಲಕರು..

mobile using
Published on

ಸಿರಿಸಿಲ್ಲಾ: ಯೂಟ್ಯೂಬ್ ವೀಡಿಯೋಗಳನ್ನು ಅನುಸರಿಸುತ್ತಿದ್ದ ಹನ್ನೊಂದು ವರ್ಷದ ಬಾಲಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾ ಎಂಬಲ್ಲಿ ನಡೆದಿದೆ.

6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಯೂಟ್ಯೂಬ್‌ನಲ್ಲಿ ತಮಾಷೆಯನ ವಿಡಿಯೋಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದನು. ಶನಿವಾರ ರಾತ್ರಿ ಊಟ ಮುಗಿಸಿ ಕೊಠಡಿಗೆ ತೆರಳಿದ್ದ ಬಾಲಕ ಮೊಬೈಲ್​​ನಲ್ಲಿ ಬ್ಯುಸಿಯಾಗಿದ್ದು ಬೀಗವನ್ನು ಹಾಕಿಕೊಂಡಿದ್ದ.

ಇದನ್ನೂ ಓದಿ: ಬೆಲೆ ಏರಿಕೆಯ ನಡುವೆ ಶುಭ ಸುದ್ದಿ: ಇಪಿಎಫ್​ ಬಡ್ಡಿ ದರ ಹೆಚ್ಚಳಕ್ಕೆ ಕೆಂದ್ರದಿಂದ ಅನುಮೋದನೆ

ಕೆಲ ಸಮಯದ ನಂತರ ಉದಯ್​​ನ ಪಾಲಕರು ಆತನಿಗೆ ಕರೆ ಮಾಡಿದ್ದು, ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಬಾಗಿಲು ಒಡೆದು ನೋಡಿದಾಗ ಬಾಲಕನು ಮೃತದೇಹ ಗೋಡೆಯ ಮೇಲೆ ನೇತಾಡುತ್ತಿರುವುದು ಕಂಡುಬಂದಿದೆ.

ಗಾಬರಿಯಾಗಿದ್ದ ಪೋಷಕರು, ಬಾಲಕನನ್ನು ಮಂಡಲ್ ಸೆಂಟರ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಸುದ್ದಿಯನ್ನು ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net