ಸರಣಿ ಅಪಘಾತದಿಂದ ಬಾಲಕ ಸಾವು; ಕಾರು ಚಾಲಕನಿಗೆ 3 ವರ್ಷ ಜೈಲು

Jail
Published on

ಬೆಂಗಳೂರು: ಅಡ್ಡಾದಿಡ್ಡಿ ಕಾರು ಚಲಾಯಿಸಿ ಸರಣಿ ಅಪಘಾತ ಎಸಗಿ, ಪಾದಚಾರಿ ಬಾಲಕನ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 3 ವರ್ಷ ಜೈಲು ಮತ್ತು 2 ಲಕ್ಷ ರೂ. ದಂಡ ವಿಧಿಸಿ ಸಿಸಿಎಚ್ 51ನೇ ನ್ಯಾಯಾಲಯ ತೀರ್ಪು ನೀಡಿದೆ.

ಕಾರು ಚಾಲಕ ಸುರೇಶ (24) ಅಪರಾಧಿ. 2017ರಲ್ಲಿ ಬಾಬೂಸಾಪಾಳ್ಯ ಸರ್ವೀಸ್ ರಸ್ತೆಯ ಗಣೇಶ ದೇವಸ್ಥಾನದ ಹತ್ತಿರ ಎಂ.ಎಂ. ಗಾರ್ಡನ್ ಕಡೆಯಿಂದ ಹೊಸವರ್ತುಲ ಮುಖ್ಯರಸ್ತೆ ಕಡೆಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದ ಸುರೇಶ, ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಕಾರಿಗೆ ಗುದ್ದಿ, ರಸ್ತೆಬದಿ ನಿಂತಿದ್ದ ಎರಡು ಸ್ಕೂಟರ್‌ಗೆ ಮತ್ತು ಇಬ್ಬರು ಬಾಲಕರಿಗೆ ಡಿಕ್ಕಿ ಹೊಡೆದಿದ್ದ.

ಇದರಿಂದ ಪಾದಚಾರಿ ಬರೂನ್ (12) ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದ. ಮತ್ತೊಬ್ಬ ಬಾಲಕ ಹೇಮಂತ್ ಎಂಬಾತ ಗಾಯಗೊಂಡಿದ್ದ. ಈ ಕುರಿತು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕ ಸುರೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net