

ಕೋಲಾರ: ಕೋಮುಲ್ ನಿರ್ದೇಶಕರ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಬುಧವಾರ ಪರಿಶೀಲನೆ ಮಾಡಲಾಗಿದ್ದು, ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿವೆ.
13 ನಿರ್ದೇಶಕ ಸ್ಥಾನಕ್ಕೆ ಒಟ್ಟು 45 ಉಮೇದುವಾರಿಕೆ ಸಲ್ಲಿಕೆಯಾಗಿತ್ತು, ನಾಮಪತ್ರ ಪರಿಶೀಲನೆಯಲ್ಲಿ 2 ನಾಮಪತ್ರ ತಿರಸತಗೊಂಡಿದ್ದು, ಒಟ್ಟು 43 ಮಂದಿ ಕಣದಲ್ಲಿ ಉಳಿದಂತಾಗಿದೆ. ನಾಮಪತ್ರ ಹಿಂಪಡೆಯುವ ಅವಕಾಶ ಮುಗಿದ ನಂತರ ಅಂತಿಮವಾಗಿ ಎಷ್ಟು ಮಂದಿ ಕಣದಲ್ಲಿ ಉಳಿಯಲಿದ್ದಾರೆ ಎಂಬುದು ಗೊತ್ತಾಗಲಿದೆ.
ಟೇಕಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಅಹನ್ಯ, ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಎ.ವಿ.ಪ್ರಸನ್ನ, ಶಾಸಕ ಕೆ.ವೈ.ನಂಜೇಗೌಡ ಅವರ ವಿರುದ್ಧ ಸ್ಪರ್ಧಿಸಿದ್ದರು. ಪ್ರಸನ್ನ ನಾಮಪತ್ರಕ್ಕೆ ಸಹಿ ಮಾಡಿರುವವರು ಅರ್ಹ ಅಂತಿಮ ಮತದಾರರ ಪಟ್ಟಿಯಲ್ಲಿ ಇಲ್ಲ, ಸೂಚಕರಾಗಿದ್ದ ವೆಂಕಟೇಶಪ್ಪ ಡೆಲಿಗೇಟ್ ಆಗಿರುವ ಸಂವು ಅನರ್ಹವಾಗಿತ್ತು. ಈ ಬಗ್ಗೆ ಕೆ.ವೈ.ನಂಜೇಗೌಡ ಅವರು ಆಕ್ಷೇಪಣೆ ಸಲ್ಲಿಸಿದ್ದರು. ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್ ಪರಿಶೀಲಿಸಿದಾಗ, ಅಭ್ಯರ್ಥಿಗೆ ಸೂಚಕರಾಗಿರುವ ಅಧಿಕಾರಟ್ಟಿ ಸಹಕಾರ ಸಂವು ಅನರ್ಹವಾಗಿರುವುದರಿಂದ ತಿರಸತಗೊಂಡಿದೆ.
ಟೇಕಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಆರ್.ಶ್ರೀನಿವಾಸ್ ನಾಮಪತ್ರವು ತಿರಸತಗೊಂಡಿದೆ. ಈ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿರುವ ರತ್ನಮ್ಮ ಸಹಿಯನ್ನು ದೃಢೀಕರಿಸಿರಲಿಲ್ಲ. ಸಹಿ ದೃಢೀಕರಿಸುವಂತೆ ಸೂಚಿಸಲಾಗಿತ್ತು. ರತ್ನಮ್ಮ ಪರಿಶೀಲನೆ ವೇಳೆ ಹಾಜರು ಇಲ್ಲದ ಕಾರಣ ದೃಢೀಕರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಶ್ರೀನಿವಾಸ್ ಅವರ ನಾಮಪತ್ರ ತಿರಸತಗೊಂಡಿದೆ. ಶಾಸಕ ಕೆ.ವೈ.ನಂಜೇಗೌಡ ಅವರು ಅವಿರೋಧ ಆಯ್ಕೆಯಾಗಲಿದ್ದು, ಅಧಿಕೃತ ಘೋಷಣೆಯಾಗಬೇಕಾಗಿದೆ.
* ಟೀಕಾಕಾರರಿಗೆ ತಕ್ಕ ಸಂದೇಶ
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಂಗಳ ಅಧ್ಯಕ್ಷರು ಅವಿರೋಧ ಆಯ್ಕೆ ಮಾಡುವ ಮೂಲಕ ಆಡಳಿತದ ಕುರಿತು ಟೀಕೆ ಮಾಡುವವರಿಗೆ ತಕ್ಕ ಸಂದೇಶ ರವಾನಿಸಿದ್ದಾರೆ. ನನ್ನ ವಿರುದ್ದ ಕಣಕ್ಕಿಳಿದಿದ್ದ ಅಭ್ಯರ್ಥಿಯ ನಾಮಪತ್ರ ತಿರಸತಗೊಂಡ ಹಿನ್ನೆಲೆಯಲ್ಲಿ ನನ್ನ ಆಯ್ಕೆ ಖಚಿತಗೊಂಡಿದ್ದು, ಚುನಾವಣಾಧಿಕಾರಿಯಿಂದ ಅಧಿಕೃತ ಘೋಷಣೆ ಆಗಬೇಕಾಗಿದೆ. ನನ್ನ ಅವಧಿಯಲ್ಲಿ ಏನೋ ನಡೆದುಹೋಗಿದೆ ಎಂದು ಟೀಕಿಸುವವರಿಗೆಲ್ಲ ಇದು ಉತ್ತರ ಎಂದರು.
ಮಾಲೂರು ಕಸಬಾ ಕ್ಷೇತ್ರದಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ನವರೇ ಕಣದಲ್ಲಿದ್ದು, ನಾಮಪತ್ರ ವಾಪಸ್ ಪಡೆಯುವ ಮೂಲಕ ಉತ್ತಮ ಸಂದೇಶ ರವಾನಿಸುತ್ತೇವೆ ಎಂದರು.
*ಎಂ.ವಿ.ಕೃಷ್ಣಪ್ಪ ಕೊಡುಗೆ ಅಪಾರ
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಅವರೂ ಗೆದ್ದುಬರಲಿ. ಕೆಜಿಎಫ್ ಕ್ಷೇತ್ರದಲ್ಲಿ 8ನೇ ಬಾರಿಗೆ ಜಯಸಿಂಹ ಕೃಷ್ಣಪ್ಪ ಅವರ ವಿರುದ್ಧ ಕಣಕ್ಕಿಳಿದಿರುವವರು ನಾಮಪತ್ರ ವಾಪಸ್ ತೆಗೆಯಬೇಕು. ಸಂಸ್ಥೆ ಕಟ್ಟಲು ಜಯಸಿಂಹ ಕೊಡುಗೆ ಇದೆ. ಎಂ.ವಿ.ಕೃಷ್ಣಪ್ಪ ಅವರು ಕೆಎಂಎಫ್ ಸ್ಥಾಪನೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸ್ಥಾಪನೆ ಮಾಡಿದ ಪಿತಾಮಹರಾಗಿದ್ದಾರೆ. ಅವರ ಮಗ ಜಯಸಿಂಹರ ವಿರುದ್ಧ ಕಾಂಗ್ರೆಸ್ನಿಂದಲೇ ಅಭ್ಯರ್ಥಿ ಹಾಕಿದ್ದು ಸರಿಯಲ್ಲ. ಎಂ.ವಿ.ಕೃಷ್ಣಪ್ಪ ಕೊಡುಗೆ ಮರೆಯಬಾರದು ಎಂದು ನಂಜೇಗೌಡ ತಿಳಿಸಿದರು.
ಮುಳಬಾಗಿಲು ತಾಲೂಕು ಎರಡೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ, ಕೋಲಾರ ಕ್ಷೇತ್ರದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಅವರು ಚಂಜಿಮಲೆ ಬಿ.ರಮೇಶ್, ಗೋಪಾಲಗೌಡ, ಸೋಮಣ್ಣ ಅವರನ್ನು ಗೆಲ್ಲಿಸಿದರೆ, ಶ್ರೀನಿವಾಸಪುರದಲ್ಲಿ ರಮೇಶ್ಕುಮಾರ್ ಅವರು ಮಂಜುನಾಥ್, ಹನುಮೇಶ್ರಂತಹ ಉತ್ತಮ ಅಭ್ಯರ್ಥಿಗಳನ್ನು ಹಾಕಿದ್ದು, ಅಲ್ಲಿಯೂ ಗೆಲುವು ಖಚಿತ. ಒಟ್ಟಾರೆ ಕೋಮುಲ್ನಲ್ಲಿ ನಮಗೆ ಬಹುಮತ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.