

ಕೋಲಾರ: ಭಾರತೀಯರು ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಆತ್ಮ ನಿರ್ಭರ ಅಭಿಯಾನ ರಾಜ್ಯ ಸಹ ಸಂಚಾಲಕ ರಾಘವೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಉತ್ಪಾದನೆಯೂ ನಮ್ಮಲ್ಲೆ ಆಗುತ್ತಿದ್ದು, ಖರೀದಿ ಮಾಡಿ ಬಳಕೆ ಮಾಡುವುದರಿಂದ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು ಎಂದರು.
ಸಾಮಾನ್ಯ ಜನತೆಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಉತ್ಪಾದನೆ ಮಾಡುವವರು ದೇಶದಲ್ಲಿದ್ದಾರೆ. ಹಲವು ಮಂದಿ ಸಣ್ಣ, ಅತಿ ಸಣ್ಣ, ಕೈಗಾರಿಕೆ ಸ್ಥಾಪನೆ ಮಾಡಿಕೊಂಡು ದೇಶದ ಜಿಡಿಪಿ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ತಯಾರಿಸುವ ದೇಶಿ ವಸ್ತುಗಳನ್ನು ಸಾಮಾನ್ಯ ಜನ ಖರೀದಿ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ವಿದೇಶಿ ಒಪ್ಪಂದಗಳಿಂದ ಬೇರೆ ದೇಶಗಳ ವಸ್ತುಗಳು ನಮ್ಮ ದೇಶಕ್ಕೆ, ನಮ್ಮ ದೇಶದ ವಸ್ತುಗಳು ಬೇರೆ ದೇಶಕ್ಕೆ ರ್ತು ಆಗುತ್ತವೆ. ಜಾಗತಿಕ ಮಟ್ಟದಲ್ಲಿ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಮ್ಮ ಮಟ್ಟದಲ್ಲಿ ಆಗುವುದು ಸ್ವದೇಶಿ ವಸ್ತು ಬಳಸುವುದು ಮಾತ್ರ. ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದರು.
ಈ ಅಭಿಯಾನವು ಕೇವಲ ಬಿಜೆಪಿ ಕಾರ್ಯಕರ್ತರಿಗಾಗಿ ನಡೆಸುತ್ತಿರುವ ಕಾರ್ಯಕ್ರಮವಲ್ಲ, ಆತ್ಮ ನಿರ್ಭರ ಯೋಜನೆಯ ಕಾರ್ಯಕ್ರಮ ಪ್ರಯೋಜನ ಲಾನುಭವಿ ಮನೆ ಬಾಗಿಲಿಗೆ ತಲುಪಿಸುವವರೂ ಅಂಬಾಸಡರ್ಗಳು ಎಂದು ತಿಳಿಸಿದರು.
ಪಂಡಿತ ದೀನದಯಾಳ ಉಪಾಧ್ಯಾಯರು ಸಾಮಾನ್ಯ ಕುಟುಂಬದವರಿಂದ ಬಂದವರಾಗಿದ್ದು, ಸ್ವಾರ್ಥಕ್ಕಾಗಿ ಬದುಕಲಿಲ್ಲ. ಪಕ್ಷದ ಬಲವರ್ಧನೆ ಜತೆಗೆ ದೇಶದ ಸಧೃಡ ಮಾರ್ಗಸೂಚಿ ನೀಡಿದ್ದಾರೆ. ದೇಶದ ಜನವು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಆತ್ಮ ನಿರ್ಭರ ತಿಳಿಸಿಕೊಟ್ಟಿದ್ದಾರೆ. ಈಗ ಅವರ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್, ಅಪ್ಪಿರಾಜು, ಮಾವು ಮಂಡಳಿ ಅಧ್ಯಕ್ಷ ಮಾಜಿ ಅಧ್ಯಕ್ಷ ವಾಸುದೇವ್, ಆತ್ಮ ನಿರ್ಭರ ಭಾರತ ಸಂಚಾಲಕ ವಿಜಿಕುಮಾರ್, ವೆಂಕಟೇಶ್ ಕೆಜಿಫ್ ನಗರ ಅಧ್ಯಕ್ಷ ಕಮಲನಾಥ್, ಜಿಲ್ಲಾ ಕಾರ್ಯದರ್ಶಿ ಕೆ.ಪದ್ಮಾವತಿ, ಮಹಿಳಾ ಮೋರ್ಚಾ ಅಧ್ಯೆ ಅರುಣಮ್ಮ, ಎಸ್ಸಿ ಮೋರ್ಚಾ ಅಧ್ಯಕ್ಷ ಕಪಾಲಿ ಶಂಕರ್, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ತೇಜಸ್ ಉಪಸ್ಥಿತರಿದ್ದರು.
ಕೇಂದ್ರದ ಕೊಡುಗೆ: ಪ್ರತಿಯೊಬ್ಬ ನಾಗರಿಕ ಸ್ವಾವಲಂಬಿಯಾಗಬೇಕು ಎನ್ನುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಜೀವನಾವಶ್ಯಕ ವಸ್ತುಗಳ ಮೇಲೆ ಜಿಎಸ್ಟಿ ಕಡಿತಗೊಳಿಸುವ ಮೂಲಕ ಜನ ಸಾಮಾನ್ಯರಿಗೆ ದೊಡ್ಡ ಉಡುಗೊರೆ ನೀಡಿದ್ದು, ಸ್ವಾವಲಂಬಿ, ಸ್ವದೇಶ ಪ್ರೇಮ, ಸ್ವಾಭಿಮಾನದ ಸೂತ್ರಗಳು ಬದುಕಿನ ಭಾಗವಾಗಿಸಲು ಕೇಂದ್ರ ನೀಡುತ್ತಿರುವ ಕೊಡುಗೆಯಾಗಿದೆ ಎಂದು ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.