ಪುಸ್ತಕಗಳ ಅಧ್ಯಯನ ಮಾಡಿ ಯಶಸ್ಸು ಗಳಿಸಿ; ಕೋಳಿವಾಡ

Oplus_131072
Oplus_131072
Published on

ರಾಣೆಬೆನ್ನೂರ: ಲೋಕಜ್ಞಾನ ತಿಳಿದುಕೊಳ್ಳಲು ಗ್ರಂಥಾಲಯಗಳಲ್ಲಿನ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡುವ ವ್ಯಕ್ತಿ ಯಶಸ್ಸು ಗಳಿಸುತ್ತಾನೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ತಾಲೂಕಿನ ಕುಸುಗೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಂಥಾಲಯ ಮತ್ತು ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಶಾಲಾ ಕಾಲೇಜಿನ ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಗುರಿಯಾಗಿರಿಸಿಕೊಂಡು ಅತ್ಯಂತ ಸೂಕ್ಷ$್ಮವಾಗಿ ಆಳವಾಗಿ ಅಧ್ಯಯನ ಮಾಡುವುದು ಅವಶ್ಯಕವಾಗಿದೆ. ಒಬ್ಬ ಉತ್ತಮ ಓದುಗಾರ ಹಲವಾರು ಉದ್ಯೋಗ ಪಡೆಯುವ ಅವಕಾಶಗಳಿವೆ. ಕುಸಗೂರು ಗ್ರಾಮದಲ್ಲಿ ಮುಂದಿನ ದಿನಮಾನಗಳಲ್ಲಿ ಐಎಎಸ್​, ಕೆಎಎಸ್​ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಗಿಟ್ಟಿಸಿ ಕೊಳ್ಳುವಂತಹ ಯುವಕ ಯುವತಿಯರು ಪ್ರಯತ್ನಿಸಲಿ ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ. ಕಾಂತೇಶರೆಡ್ಡಿ ಗೋಡಿಹಾಳ, ಮಹಿಳೆಯರನ್ನು ಗೌರವದಿಂದ ಕಂಡು ಅವರೊಂದಿಗೆ ಉತ್ತಮವಾದ ಮಾತುಗಾರಿಕೆ ನಡೆದುಕೊಳ್ಳುವಿಕೆ ಸೌಹಾರ್ದ ಬದುಕು ಸಾಗಿಸುವುದರಿಂದ ಪ್ರತ್ಯಕ್ಷ ದೇವಿಯ ದರ್ಶನ ವಾಗುವುದು. ದೇವಿ ಮಹಾತ್ಮೆಯಲ್ಲಿ ಬರುವ ಎಲ್ಲ ವಿಚಾರಗಳು ದೇಹದ ವಿಚಾರಗಳು ಆಗಿವೆ. ಜಗತ್ತಿನ ಸೃಷ್ಟಿ ನಿಯಮಗಳೆಲ್ಲವೂ ಮನುಷ್ಯರ ಸೃಷ್ಟಿಯಲ್ಲಿವೆ ರಾಕ್ಷಸರು ನಮ್ಮೊಳಗಿರುವ ಅಸಹಕಾರ ವಿಕಾರಗಳು ಕೆಟ್ಟ ಬುದ್ಧಿ ಮತ್ತೊಬ್ಬರಿಗೆ ಕೆಡುಕು ಮಾಡುವ ವಿಚಾರ ಇವೆ ಮೊದಲಾದ ರಾಕ್ಷಸ ಪ್ರವೃತ್ತಿಗೆ ವಿಚಾರಗಳಿಂದ ದೂರವಿದ್ದಾಗ ತಾನೇ ಸ್ವಯಂ ದೇವಿಯಾಗಿ ಪರಮಾತ್ಮನಾಗುವನು ಎಂದರು.

ಗ್ರಾಪಂ ಅಧ್ಯಕ್ಷ ರಮೇಶ ಹೊಂಬರಡಿ ಅಧ್ಯಕ್ಷತೆ ವಹಿಸಿದ್ದರು.

ಹಾವೇರಿಯ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಉಪನ್ಯಾಸಕ ಶಿವಾನಂದ ಎಚ್​., ರಾಜಸಾಬ ದೊಡ್ಡಮನಿ, ತಿಮ್ಮರೆಡ್ಡಿ ಜಂಗರಡ್ಡೇರ, ಜ್ಯೋತಿ ಕನ್ನಪ್ಪಳವರ, ಮೇಲಗಿರಿಯಪ್ಪ ಮೇಲಗಿರಿ, ಬಸವರಡ್ಡಿ ಗೋಡಿಹಾಳ, ಆಸ್ಮಾಬಾನು ದೊಡ್ಮನಿ, ಆರ್​. ಎಸ್​. ಮೇಲಗಿರಿ, ರೇಖಾ ಮೂಲಿಮನಿ, ಸತೀಶ ಹನುಮಂತಪ್ಪ ಕೇತಾಳೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net