

ರಾಣೆಬೆನ್ನೂರ: ಗ್ರಂಥಾಲಯಗಳನ್ನು ಸರ್ಕಾರ ಅರಿವು ಕೇಂದ್ರವನ್ನಾಗಿ ಮಾಡಿದ್ದು ಗ್ರಂಥಾಲಯಗಳು ಕೇವಲ ಪುಸ್ತಕದ ಭಂಡಾರವಾಗದೆ ಗ್ರಾಮದ ಮಕ್ಕಳಿಗೆ, ವಿದ್ಯಾಥಿರ್ಗಳಿಗೆ, ಯುವಕರಿಗೆ ಗ್ರಾಮಕ್ಕೆ ಸಂಬಂಧಿಸಿದ ಇತಿಹಾಸ, ಶಿಕ್ಷಣ, ಆರೋಗ್ಯ ವಿಷಯಗಳ ಮಾಹಿತಿ ನೀಡುವ ಕೇಂದ್ರಗಳಾಗಬೇಕು. ಇದರಿಂದ ಗ್ರಾಮಗಳು ವಿಕಾಸಗೊಳ್ಳುತ್ತವೆ ಎಂದು ಅರಿವು ಕೇಂದ್ರದ ಸಲಹಾ ಸಮಿತಿಯ ಕಾರ್ಯದಶಿರ್ ಹಾಗೂ ನಿಂಗಪ್ಪ ಲೆಕ್ಕಿಕೋನಿ ಹೇಳಿದರು.
ತಾಲೂಕಿನ ಮೇಡ್ಲೇರಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಅರಿವು ಕೇಂದ್ರದ ಸಲಹಾ ಸಮಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಮಾತನಾಡಿ, ಓದುಗರಿಗೆ ಅಗತ್ಯ ಪಿಠೋಪಕರಣಗಳು ಹಾಗೂ ಪುಸ್ತಕದ ಶೇಖರಣೆಗೆ ಕಪಾಟುಗಳನ್ನು ಹೆಚ್ಚಿಸಬೇಕು. ದಾನಿಗಳ ನೆರವಿನಿಂದ ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕಗಳನ್ನು ಶೇಖರಿಸಲು ಸಲಹಾ ಸಮಿತಿ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು. ಗ್ರಂಥಾಲಯಕ್ಕೆ ಜಾಗ ದಾನ ಮಾಡಿದವರ ಫೋಟೋ ಮತ್ತು ಅವರ ಹೆಸರು ಹಾಕುವಂತೆ ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಬಸವಣ್ಣೆಮ್ಮ ಮಾಳಗಿ ಅಧ್ಯಕ್ಷತೆ ವಹಿಸಿದ್ದರು.
ಸಲಹಾ ಸಮಿತಿಯ ಸದಸ್ಯರಾದ ಮಾರುತಿ ತಳವಾರ, ಅರುಣಕುಮಾರ ಹೊನ್ನಪ್ಪಳವರ, ಎಸ್.ಎಲ್. ಹರಿಹರ, ಮಂಜುಳಾ ಚಲವಾದಿ, ಯಲ್ಲಪ್ಪ ಎಲಿಗಾರ, ಸಚಿನ್ ಕೂನಬೇವು, ಚೈತ್ರಾ ಇಂಗಳಗೊಂದಿ, ಮಂಜು ಜಾಗಟಿ ಉಪಸ್ಥಿತರಿದ್ದರು.
ವಿನಾಯಕ ಗುಡಿಹಿಂದ್ಲರ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕ ಚಂದ್ರಪ್ಪ ಅಣ್ಣಿ ವಂದಿಸಿದರು.