ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಛಾವಣಿ ಕುಸಿತ; ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದ ಆರೋಪ!

accident
Published on

ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯಲ್ಲಿ ಇಂದು ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಚಾವಣಿ ಕುಸಿದಿದ್ದು, ಇದರಿಂದಾಗಿ ಇಬ್ಬರಿಗೆ ಕಾರ್ಮಿಕರಿಬ್ಬರಿಗೆ ಗಾಯಗಳಾಗಿವೆ.

ಬೊಮ್ಮನಹಳ್ಳಿಯ ಹೊಸಪಾಳ್ಯದ ಸಮೀಪದಲ್ಲಿರುವ ಕುವೆಂಪು ಕ್ರೀಡಾಂಗಣದ ಒಳಗೆ ಮೇಲ್ಛಾವಣಿಯ ಕೆಲಸ ಮಾಡಲಾಗುತ್ತಿದ್ದು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕಬ್ಬಿಣದ ಛಾವಣಿ ತುಂಡಾಗಿ ಬಿದ್ದಿದೆ. ಮೇಲ್ಚಾವಣಿಗೆ ಹಾಕಿದ್ದ ಹೆಂಚುಗಳೆಲ್ಲವೂ ಪುಡಿಪುಡಿಯಾಗಿವೆ.

ಈ ನಡುವೆ ಈ ಕಾಮಗಾರಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ಇಲ್ಲದೆ ಕೆಲಸ ಮಾಡಿಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಬಿಎಂಪಿ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳ ಭೇಟಿ

ಬೊಮ್ಮನಹಳ್ಳಿಯ ಹೊಸಪಾಳ್ಯ ಸಮೀಪದ ಕ್ರೀಡಾಂಗಣ ಕುಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು ಮೇಲ್ಚಾವಣಿ ಕುಸಿದಿರುವ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭ ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ಅಜಿತ್ ಜತೆಗೆ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ಭೇಟಿ ನೀಡಿದ್ದರು.

ಮೇಲ್ಚಾವಣಿ ಕುಸಿತದ ಕುರಿತು ಜಂಟಿ ಆಯುಕ್ತರು ಹೇಳಿಕೆ ನೀಡಿದ್ದು, "ಅನುಮತಿ ಪಡೆಯದೆ ಕಂಟ್ರಾಕ್ಟರ್ ಕೆಲಸ ಮಾಡಿದ್ದಾರೆ. ಮೇಲ್ಚಾವಣಿ ಕುಸಿತದಿಂದ ಕಾರ್ಮಿಕರಿಗೆ ಗಾಯಗಳಾಗಿವೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೇಲೆ ಹೆಂಚು ಹಾಕುವಾಗ ಭಾರ ತಡೆಯದೆ ಬಿದ್ದಿದೆ. ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ" ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net