ಬೊಮ್ಮನಹಳ್ಳಿ ಠಾಣೆ ಕಾನ್‌ಸ್ಟೆಬಲ್ ಸೆರೆ

prajavani_2024-09-18_1pz8prml_deccanherald_import_sites_dh_files_article_images_2019_10_12_Arrest-1570847915.jpeg
Published on

ಬೆಂಗಳೂರು: ದೂರು ಕೊಡಲು ಠಾಣೆಗೆ ತಾಯಿ ಜತೆಗೆ ಬಂದಿದ್ದ ಬಾಲಕಿಗೆ ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ಕಾನ್‌ಸ್ಟೆಬಲ್‌ನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ಠಾಣೆಯ ಕಾನ್‌ಸ್ಟೆಬಲ್ ಅರುಣ್ ತೋನೆಪ್ಪ ಬಂಧಿತ. ಮೈಕೋ ಲೇಔಟ್ ಠಾಣೆಯಲ್ಲಿ ಎ್ಐಆರ್ ದಾಖಲಾಗುತ್ತಿದಂತೆ ತಲೆಮರೆಸಿಕೊಂಡಿದ್ದ ಅರುಣ್‌ನ್ನು ಪತ್ತೆಹಚ್ಚಲಾಗಿದೆ. ಮತ್ತೊಬ್ಬ ಆರೋಪಿ ವಿಕ್ಕಿ ಎಂಬಾತನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ತಾಯಿ ಜತೆಗೆ ನೆಲೆಸಿದ್ದ ಅಪ್ರಾಪ್ತ ಬಾಲಕಿಗೆ ಎದುರು ಮನೆಯಲ್ಲಿ ನೆಲೆಸಿದ್ದ ವಿಕ್ಕಿ ಎಂಬಾತ ಪ್ರೀತಿಸುವುದಾಗಿ ಹಿಂದೆ ಬಿದ್ದು ಮದುವೆ ಆಗುವುದಾಗಿ ನಂಬಿಸಿದ್ದ. 2024ರ ಮೇ ಯಿಂದ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ವಿಷಯ ತಿಳಿದ ಸಂತ್ರಸ್ತೆಯ ತಾಯಿ, ಮಗಳ ರಕ್ಷಣೆಗಾಗಿ ಬೊಮ್ಮನಹಳ್ಳಿ ಠಾಣೆಗೆ ಬಂದು ವಿಕ್ಕಿ ವಿರುದ್ಧ ದೂರು ನೀಡಿದ್ದರು.

ಇದೆ ವೇಳೆ ಕ್ರೈಂ ಟೀಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್, ಸಂತ್ರಸ್ತೆ ತಾಯಿಯನ್ನು ಪರಿಚಯ ಮಾಡಿಕೊಂಡು ‘ನಿಮ್ಮ ಮಗಳಿಗೆ ಓದಲು ಸಹಾಯ ಮಾಡುತ್ತೆನೆ. ಅಲ್ಲದೆ, ಕೆಲಸ ಕೊಡಿಸುವುದಾಗಿ’ ನಂಬಿಸಿ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇದಾದ ಮೇಲೆ ಡಿ. 18ರಂದು ಕೆಲಸಕ್ಕೆ ಸೇರಿಸುವುದಾಗಿ ಸಂತ್ರಸ್ತೆಯನ್ನು ಕರೆಸಿಕೊಂಡು ಬಿಟಿಎಂ ಲೇಔಟ್‌ನಲ್ಲಿ ಇರುವ ಪೇಯಿಂಗ್ ಗೆಸ್ಟ್‌ನಲ್ಲಿ ಇರಿಸಿದ್ದ. ಆನಂತರ ಡಿ.22 ಮತ್ತು 30ರಂದು ಬಿಟಿಎಂ ಲೇಔಟ್‌ನಲ್ಲಿ ಇರುವ ಓಯೋ ಲಾಡ್ಜ್‌ಗೆ ಕರೆದುಕೊಂಡು ಅಪ್ರಾಪ್ತೆಗೆ ಮದ್ಯ ಕುಡಿಸಿ ಮತ್ತುಬರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.ಅಲ್ಲದೆ, ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.

ಸಂತ್ರಸ್ತೆಯ ತಾಯಿ, ನ್ಯಾಯಕೋರಿ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದರು. ಗಂಭೀರವಾಗಿ ಪರಿಗಣಿಸಿದ ಕೂಡಲೇ ಎ್ಐಆರ್ ದಾಖಲಿಸಿ ಕ್ರಮಕ್ಕೆ ಸೂಚಿಸಿದ್ದರು. ಈ ಮೇರೆಗೆ ಮೈಕೋ ಲೇಔಟ್ ಠಾಣೆಯಲ್ಲಿ ಆರೋಪಿ ವಿಕ್ಕಿ ಮತ್ತು ಅರುಣ್ ವಿರುದ್ಧ ಕೇಸ್ ದಾಖಲಿಸಿ ಪ್ರಕರಣವನ್ನು ಬೊಮ್ಮನಹಳ್ಳಿ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ತನಿಖೆ ಕೈಗೊಂಡಿರುವ ಅಧಿಕಾರಿಗಳು, ಆರೋಪಿ ವಿಕ್ಕಿ ಮತ್ತು ಅರುಣ್‌ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net