ಸ್ಮಾರ್ಟ್ ಸ್ಟೆತಾಸ್ಕೋಪ್ ಅಭಿವೃದ್ಧಿಪಡಿಸಿದ ಬಾಂಬೆ ಐಐಟಿ, ಸಂಶೋಧನಾ ತಂಡದಿಂದ ಪೇಟೆಂಟ್​

smart steth
Published on

ಮುಂಬೈ: ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ತಂಡವೊಂದು ಸ್ಮಾರ್ಟ್ ಸ್ಟೆತಾಸ್ಕೋಪ್​ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಎದೆ  ಮೇಲೆ ಇರಿಸದೆ ದೂರದಿಂದಲೇ ಹೃದಯದ ಬಡಿತ ಪರಿಶೀಲಿಸಬಹುದಾಗಿದೆ. ಇದರಿಂದಾಗಿ ಕರೊನಾದಂಥ ಸೋಂಕಿನ ಸಂದರ್ಭದಲ್ಲಿ ರೋಗಿಯ ಬಳಿ ಹೋಗದೆ ದೂರದಿಂದಲೇ ಪರಿಶೀಲಿಸುವುದರಿಂದ ವೈದ್ಯರು ಸೋಂಕು ತಗಲುವ ಭಯಮುಕ್ತರಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬಾಂಬೆ ಐಐಟಿಯ ಸಂಶೋಧನಾ ತಂಡ ಹೇಳಿದೆ.

ಟ್ಯೂಬ್ ಒಂದಕ್ಕೆ ಎರಡು ಇಯರ್​ಪೀಸ್​ಗಳನ್ನು ಅಳವಡಿಸಿರುವ ಸ್ಮಾರ್ಟ್ ಸ್ಟೆತಾಸ್ಕೋಪ್ ಅನ್ನು ರೋಗಿಗೆ ಅಳವಡಿಸಿ, ಬ್ಲೂಟೂತ್​ ಬಳಳಿ ವೈದ್ಯರು ದೂರದಿಂಲೇ ರೋಗಿಯ ಉಸಿರಾಟದ ಶಬ್ದವನ್ನು ಕೇಳಿಸಿಕೊಳ್ಳಬಹುದಾಗಿದೆ. ಈ ಸ್ಟೆತಾಸ್ಕೋಪ್​ಗೆ ಸಂಶೋಧನಾ ತಂಡ ಪೇಟೆಂಟ್ ಕೂಡ ಪಡೆದುಕೊಂಡಿದೆ.

ದೇಹದ ಹೊರಗಿನ ಬೇರೆಲ್ಲಾ ಸದ್ದನ್ನು ನಿಯಂತ್ರಿಸಿ ಕೇವಲ ದೇಹದೊಳಗಿನ ಉಸಿರಾಟದ ಸದ್ದನ್ನು ಮಾತ್ರ ರವಾನಿಸುವುದು ಈ ಸ್ಟೆತಾಸ್ಕೋಪ್​ನ ವಿಶೇಷತೆಯಾಗಿದೆ. ಈ ಸದ್ದನ್ನು ಅದು ಆಪ್ಟಿಕಲ್​ ಸಿಗ್ನಲ್​ ಆಗಿ ಪರಿವರ್ತಿಸಿ ರವಾನಿಸುತ್ತದೆ.  ದೇಶದಾದ್ಯಂತ ಈಗಾಗಲೆ ಇಂಥ ಒಂದು ಸಾವಿರ ಸ್ಟೆತಾಸ್ಕೋಪ್​ಗಳನ್ನು ಹಂಚಿರುವುದಾಗಿ ಸಂಶೋಧನಾ ತಂಡ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net