ಜಾಕೋಬಾಬಾದ್​ನಲ್ಲಿ ಬಾಂಬ್ ಸ್ಫೋಟ: ಹಳಿತಪ್ಪಿದ ಜಾಫರ್ ಎಕ್ಸ್‌ಪ್ರೆಸ್ ರೈಲು| jaffar-express

Untitled design
Published on

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಜಾಕೋಬಾಬಾದ್​ನ ಹಳಿಯ ಬಳಿ ಬಾಂಬ್​ ಸ್ಫೋಟ ಸಂಭವಿಸಿದ ಪರಿಣಾಮ ಜಾಫರ್ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದೆ. ರೈಲ್ವೆ ಹಳಿಯಲ್ಲಿ ಇಂದು (18) ಸಂಭವಿಸಿದ ಸ್ಫೋಟದಲ್ಲಿ ಜಾಫರ್ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿದೆ.

ಮಾರ್ಚ್‌ನಲ್ಲಿ ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಬಲೂಚಿಸ್ತಾನದ ಬೋಲಾನ್ ಪ್ರದೇಶದಲ್ಲಿ ಅಪಹರಿಸಲ್ಪಟ್ಟ ನಂತರ ಇತ್ತೀಚಿನ ತಿಂಗಳುಗಳಲ್ಲಿ ಇದು ಎರಡನೇ ಬಾರಿ ಜಾಫರ್ ಎಕ್ಸ್‌ಪ್ರೆಸ್ ಮೇಲೆ ದಾಳಿ ನಡೆಸಲಾಗಿದೆ. ಅದರಲ್ಲಿ ಕನಿಷ್ಠ 380 ಪ್ರಯಾಣಿಕರಿದ್ದರು. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಸ್ಫೋಟದ ನಂತರ ಪೊಲೀಸ್ ತುಕಡಿ ಆ ಪ್ರದೇಶವನ್ನು ಸುತ್ತುವರೆದಿದ್ದು, ಅಧಿಕಾರಿಗಳು ಪ್ರಸ್ತುತ ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದ್ದಾರೆ. ಇನ್ನೂ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಳಿಕ ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರು ಮತ್ತು ರೈಲ್ವೆ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು ಘಟನೆಯ ತನಿಖೆ ನಡೆಸಲು ತ್ವರಿತವಾಗಿ ಸ್ಥಳಕ್ಕೆ ಧಾವಿಸಿದ್ದಾರೆ.

ರೈಲು ಅಪಹರಣಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಸಶಸ್ತ್ರ ಪಡೆಗಳು ಮಾರ್ಚ್ 11 ಮತ್ತು 12 ರ ನಡುವೆ ಆಪರೇಷನ್ ಗ್ರೀನ್ ಬೋಲನ್ ಅನ್ನು ಪ್ರಾರಂಭಿಸಿದವು. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯಲ್ಲಿ 18 ಸೈನಿಕರು ಮತ್ತು 33 ದಾಳಿಕೋರರು ಸೇರಿದಂತೆ ಕನಿಷ್ಠ 64 ಜನರು ಸಾವನ್ನಪ್ಪಿದರು ಮತ್ತು 38 ಇತರರು ಗಾಯಗೊಂಡರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net