Bollywood | ಪಟೌಡಿ ಅರಮನೆಯನ್ನು ಸೈಫ್​ ಅಲಿ ಖಾನ್​ ಮ್ಯೂಸಿಯಂ ಮಾಡುವುದು ನಿಜವೇ; ಬಿಟೌನ್​ ನಟ ಹೇಳಿದ್ದೇನು?

Untitled-design-2024-09-27T211655.168
Published on

ಮುಂಬೈ: ಬಾಲಿವುಡ್​(Bollywood) ನಟ ಸೈಫ್​ ಅಲಿ ಖಾನ್​ ಅಭಿನಯದ ದೇವರ ಸಿನಿಮಾ ಇಂದು (ಸೆಪ್ಟೆಂಬರ್​​ 27) ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಸೈಫ್​ ಬಹಳ ದಿನಗಳಿಂದ ಸುದ್ದಿಯಲ್ಲಿದ್ದರು. ಆದರೆ ಇದೆ ಸಮಯದಲ್ಲಿ ಸೈಫ್​​ ತನ್ನ ಪೂರ್ವಜರ ಮನೆಯಾದ ಪಟೌಡಿ ಅರಮನೆಯ ಮಾಲೀಕತ್ವವನ್ನು ಹಿಂತೆಗೆದುಕೊಂಡಾಗಿನಿಂದ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಬಗ್ಗೆ ಊಹಾಪೋಹಗಳು ಬಿಟೌನ್​ ಅಂಗಳದಲ್ಲಿ ಹರಿದಾಡುತಿತ್ತು. ಇದಕ್ಕೆಲ್ಲಾ ಫುಲ್​​ಸ್ಟಾಪ್​ ಇಡುವಂತೆ ಸೈಫ್​​​ ಪ್ರತಿಕ್ರಿಯಿಸಿದ್ದು, ನನ್ನ ಹೃದಯದಲ್ಲಿ ಈ ಪಟೌಡಿ ಅರಮನೆಗೆ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ.

ತಮ್ಮ ಐತಿಹಾಸಿಕ ಮನೆ ಪಟೌಡಿ ಅರಮನೆಯ ಮಹತ್ವದ ಬಗ್ಗೆ ಮಾತನಾಡಿದ ಸೈಫ್, ಪರಂಪರೆಯ ವಿಷಯದಲ್ಲಿ ಈ ಮನೆಯು ಕಾಲಾನಂತರದಲ್ಲಿ ವಿಭಿನ್ನ ಜನರಿಗೆ ಸೇರಿದೆ. ನವಾಬನಾಗಿ ನನ್ನ ತಂದೆ ಹುಟ್ಟಿದ್ದಾರೆ. ಅವರು ತಮ್ಮ ಸ್ವಂತ ನಿಯಮಗಳ ಮೇಲೆ ಜೀವನವನ್ನು ನಡೆಸಿದರು. ಅವರು ಅತ್ಯಂತ ಅದ್ಭುತ ವ್ಯಕ್ತಿಯಾಗಿದ್ದರು. ಅವರು ಪಟೌಡಿ ಮನೆಯನ್ನು ಹೋಟೆಲ್​​ಗೆ ಬಾಡಿಗೆಗೆ ನೀಡಲು ನಿರ್ಧರಿಸಿದ್ದರು. ಅದನ್ನು ಎಂದಿಗೂ ಮಾಡಬೇಡಿ' ಎಂದು ನನ್ನ ಅಜ್ಜಿ ನನಗೆ ಹೇಳಿದ್ದು ನನಗೆ ನೆನಪಿದೆ. ಇದು ಸಾಕಷ್ಟು ಇತಿಹಾಸವನ್ನು ಹೊಂದಿದೆ ಮತ್ತು ಇದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ನನ್ನ ಅಜ್ಜಿಯರನ್ನು ಅಲ್ಲೇ ಸಮಾಧಿ ಮಾಡಲಾಗಿದೆ, ನನ್ನ ತಂದೆಯನ್ನೂ ಅಲ್ಲೇ ಸಮಾಧಿ ಮಾಡಲಾಗಿದೆ. ಇದು ನನ್ನ ಕುಟುಂಬದ ಮನೆ. ಇಲ್ಲಿ ಸಾಕಷ್ಟು ಹಳೆಯ ಮನೆಗಳಿದ್ದು ನಾವು ಅವುಗಳನ್ನು ದರ್ಬಾರ್ ಹಾಲ್ ಎಂದು ಕರೆಯುತ್ತೇವೆ. ಅಲ್ಲದೆ ನಮ್ಮ ತಂದೆ, ಯಾವುದೇ ರೀತಿಯ ಹಣಕಾಸಿನ ಆನುವಂಶಿಕತೆಯನ್ನು ನಿರೀಕ್ಷಿಸಬೇಡಿ. ಜಗತ್ತು ಬದಲಾಗಿದೆ, ನಾನು ನಿಮಗೆ ಉತ್ತಮ ಶಿಕ್ಷಣವನ್ನು ನೀಡುತ್ತೇನೆ. ಆದರೆ ಅದನ್ನು ಹೊರತುಪಡಿಸಿ ಎಲ್ಲವನ್ನೂ ನೀವೇ ನಿಭಾಯಿಸಬೇಕು ಎಂದಿದ್ದರು ಎಂದು ಹೇಳಿದರು.

ಸೈಫ್ ಅವರ ತಂದೆ ಆಸ್ತಿಯನ್ನು ಹೋಟೆಲ್‌ಗೆ ಗುತ್ತಿಗೆ ನೀಡಿದ್ದರೆ, ತಾನು ಮಾತ್ರ ತನ್ನ ಅಜ್ಜಿಯ ಸಲಹೆಯನ್ನು ಅನುಸರಿಸುತ್ತಿದ್ದಾರೆ. ಪ್ರಸ್ತುತ ತನ್ನ ಪೂರ್ವಜರ ಸಾಧನೆಗಳನ್ನು ಎತ್ತಿ ತೋರಿಸಲು ಆಸ್ತಿಯ ಒಂದು ಭಾಗವನ್ನು ಆರ್ಕೈವ್ ಆಗಿ ಪರಿವರ್ತಿಸುವುದಾಗಿ ತಿಳಿಸಿದರು. ಸೈಫ್ ಅಲಿ ಖಾನ್ ಅವರು ಅರಮನೆಯ ಏಕೈಕ ಮಾಲೀಕರಾಗಿದ್ದಾರೆ. ಅವರ ಸಹೋದರಿಯರಾದ ಸಬಾ ಮತ್ತು ಸೋಹಾ ಅವರೊಂದಿಗೆ ಮಾಲೀಕತ್ವವನ್ನು ಹಂಚಿಕೊಂಡಿಲ್ಲ. ಏಕೆಂದರೆ ಪ್ರಿವಿ ಪರ್ಸ್ ರದ್ದುಗೊಳ್ಳುವ ಮೊದಲು ಅವರು 'ನವಾಬ್' ಆಗಿ ಜನಿಸಿದ್ದರು. ಇದನ್ನು ಸೈಫ್ ಅವರ ತಾತ ಪಟೌಡಿಯ ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ನಿರ್ಮಿಸಿದ್ದಾರೆ. ಪ್ರಸ್ತುತ ಸೈಫ್ ತಾಯಿ, ನಟಿ ಶರ್ಮಿಳಾ ಠಾಗೋರ್ ಅಲ್ಲಿ ವಾಸಿಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net