ಮುಸ್ಲಿಮರು ಹಸುಗಳನ್ನು ಸಾಕಿ, ಸಸ್ಯಾಹಾರವನ್ನು ಅಳವಡಿಸಿಕೊಳ್ಳಬೇಕು: IAS ಅಧಿಕಾರಿ ನಿಯಾಜ್​ ಖಾನ್​

Niyaz khan
Published on

ಭೋಪಾಲ್: ದೇಶದಲ್ಲಿ ಮತಾಂತರ ನಡೆಯಲು ಬಾಲಿವುಡ್​ ಮುಖ್ಯ ಕಾರಣ ಎಂದು ಮಧ್ಯಪ್ರದೇಶದ ಐಎಎಸ್​ ಅಧಿಕಾರಿ ನಿಯಾಜ್​ ಖಾನ್​ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ದಾಮೋದ ಗಂಗಾ ಜಮುನಾ ಶಾಲೆಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಂತಾರ ಕುರಿತು ಅವರು ಪ್ರತಿಕ್ರಿಯಿಸಿದ್ದು ಇದಕ್ಕೆಲ್ಲಾ ಬಾಲಿವುಡ್​ ನೇರ ಕಾರಣ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಿಯಾಜ್​ ಖಾನ್​ ಧಾರ್ಮಿಕ ಮತಾಂತರ ಸರಿಯಲ್ಲ ಇದು ಆರಂಭವಾಗಿದ್ದು ಬಾಲಿವುಡ್​ನಿಂದ. ದೊಡ್ಡ ಸಿನಿಮಾ ತಾರೆಯರು ಹಿಂದೂಗಳನ್ನು ಮುಸಲ್ಮಾನರಾಗಿಸಿದ್ದು, ಇಂದಿಗೂ ಅಲ್ಲಿ ನಡೆಯುತ್ತಿದೆ. ಮತಾಂತರ ಮಾಡುವುದು ದೊಡ್ಡ ತಪ್ಪು ಏಕೆಂದರೆ ನಾವು ಒಂದು ಧರ್ಮವನ್ನು ಬೇರೆ ಎಲ್ಲದ್ದಕ್ಕಿಂತ ಮಿಗಿಲು ಎಂದು ಪರಿಗಣಿಸಿರುತ್ತೇವೆ.

ನಮ್ಮ ದೇಶ ಪ್ರಜಾಸತ್ತಾತ್ಮಕ ದೇಶ, ಇಲ್ಲಿ ಎಲ್ಲ ಧರ್ಮಗಳೂ ಸಮಾನ. ಒಂದು ವೇಳೆ ಅನ್ಯ ಧರ್ಮದವರು ಪ್ರೀತಿಸಿ ಮದುವೆಯಾದಾಗ ಅಂತಹ ಸಂದರ್ಭದಲ್ಲಿ ಮತಾಂತರವಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಇಬ್ಬರ ನಡುವೆ ಪ್ರೀತಿಯಿದ್ದು ತಮ್ಮ ತಮ್ಮ ಧರ್ಮವನ್ನು ಅನುಸರಿಸಿದರೆ ಸಾಕು ಧಾರ್ಮಿಕ ಮತಾಂತರ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮುಸಲ್ಮಾನರ ಕುರಿತು ಟ್ವೀಟ್​ ಮಾಡಿರುವ ನಿಯಾಜ್​ ಖಾನ್​ ಭಾರತದಲ್ಲಿ ಮುಸ್ಲಿಮರು ಹಸುಗಳನ್ನು ಸಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಅವರ ಆಹಾರ ಪದ್ದತಿಯಲ್ಲಿ ಸಸ್ಯಹಾರವನ್ನು ಅಳವಡಿಸಿಕೊಳ್ಳಬೇಕು. ಬ್ರಾಹ್ಮಣರ ಜೊತೆ ಮುಸ್ಲಿಮರು ಉತ್ತಮ ಭಾಂದವ್ಯವನ್ನು ಹೊಂದಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net