ಒಂದೇ ವಿಷಯದ ಹಿಂದೆ ಎಲ್ಲರ ಓಟ! ಬದಲಾಯ್ತು ಬಾಲಿವುಡ್​ ದಿಕ್ಕು; ಏನಿರಬಹುದು ಕಾರಣ? | Bollywood

Untitled design (55)
Published on

Bollywood: ಕಳೆದ ವರ್ಷ 'ಸ್ತ್ರೀ 2', 'ಫೈಟರ್'​, 'ಸಿಂಗಂ ಅಗೈನ್'​ ಸೇರಿದಂತೆ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿಬಿಟ್ಟಿದ್ದು ಬಿಟ್ಟರೆ, ಉಳಿದೆಲ್ಲ ಚಿತ್ರಗಳು ಫ್ಲಾಪ್​ ಸಾಲಿಗೆ ಸೇರಿತು. ಲಾಭವನ್ನು ಕಾಣಬೇಕಿದ್ದ ಬಾಲಿವುಡ್​, ನಿರೀಕ್ಷೆಗೆ ತಕ್ಕಂತೆ ಆದಾಯವನ್ನು ಗಳಿಸುವಲ್ಲಿ ವಿಫಲವಾಯಿತು. ಇದೀಗ ತನ್ನ ದಿಕ್ಕನ್ನು ಬದಲಿಸಿರುವ ಹಿಂದಿ ಚಿತ್ರೋದ್ಯಮ, ಲವ್​ ಜಾನರ್​​ನಿಂದ ಆ್ಯಕ್ಷನ್​ ಜಾನರ್​ ಮೇಲೆ ಹೆಚ್ಚು ಫೋಕಸ್​ ಮಾಡಲಾರಂಭಿಸಿದೆ.

ಈ ಮೊದಲು ಹೆಚ್ಚಾಗಿ ಪ್ರೀತಿ, ರೊಮ್ಯಾಂಟಿಕ್ ಕಥಾಹಂದರಗಳನ್ನೇ ಆಯ್ದುಕೊಳ್ಳುತ್ತಿದ್ದ ಬಾಲಿವುಡ್​, ಈಗ ಅದ್ಯಾವುದು ಲಾಭ ತಂದುಕೊಡುತ್ತಿಲ್ಲ ಎಂಬ ಸಂಗತಿಯನ್ನು ಅರಿತು, ಆ್ಯಕ್ಷನ್​ ಅಂದರೆ ಯುದ್ಧದ ಸನ್ನಿವೇಶಗಳನ್ನು ಒಳಗೊಂಡಂತ ಕಥೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಲವ್​ ಆಧರಿತ ಕಥೆಗಳು ಬಾಲಿವುಡ್​ಗೆ ಸೂಟ್​ ಆಗ್ತಿಲ್ಲ ಎನ್ನುವಂತಾಗಿದೆ. ಸಲ್ಮಾನ್​ ಖಾನ್ ಅಭಿನಯದ 'ಸಿಕಂದರ್', ಬಿಡುಗಡೆ ಆಗಲು ಸಜ್ಜಾಗಿರುವ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರಗಳು ವಾರ್​ ಕಥೆಯನ್ನೇ ಹೊಂದಿವೆ.

ಇನ್ನು ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಬೆಳ್ಳಿತೆರೆಗೆ ಪ್ರವೇಶಿಸಲು ಎದುರುನೋಡುತ್ತಿದ್ದು, ಇತ್ತೀಚೆಗಷ್ಟೇ ಅವರು ಅಭಿನಯದ ಚಿತ್ರದ ಟ್ರೇಲರ್​ ರಿಲೀಸ್ ಆಯಿತು. ಅಸಲಿಗೆ ಈ ಚಿತ್ರವು ಒಂದು ಪ್ರೇಮಕಥೆಯಲ್ಲ. ಬದಲಿಗೆ ಯುದ್ಧ ಹಿನ್ನೆಲೆಯ ಕಥೆ ಎಂಬುದು ಇಲ್ಲಿ ಗಮನಾರ್ಹ. 1971ರ ಇಂಡೋ-ಪಾಕ್ ಯುದ್ಧದ ಬಸಂತಪುರ ಕದನದಲ್ಲಿ ವೀರೋಚಿತವಾಗಿ ಹೋರಾಡಿದ ನಂತರ 21ನೇ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸೇನಾಧಿಕಾರಿ ಅರುಣ್ ಕೇತರ್ಪಾಲ್ ಅವರ ಪಾತ್ರವನ್ನು ಅಗಸ್ತ್ಯ ನಿಭಾಯಿಸಿದ್ದಾರೆ. ಸಿನಿಮಾ ಇದೇ ಡಿ.25ರಂದು ದೇಶವ್ಯಾಪಿ ಬಿಡುಗಡೆಯಾಗಲಿದೆ.

ಇದೇ ಜಾನರ್​ಗೆ ಸೇರಿದ ಮತ್ತೊಂದು ಚಿತ್ರ 'ಬಾರ್ಡರ್ 2'. 1971ರ ಇಂಡೋ-ಪಾಕ್ ಯುದ್ಧ ಈ ಚಿತ್ರದ ಕಥಾಹಂದರ. ನಟ ಬಾಬಿ ಡಿಯೋಲ್, ವರುಣ್ ಧವನ್ ಮತ್ತು ಅಹಾನ್ ಶೆಟ್ಟಿ ಸೇರಿ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಸುತ್ತಿದ್ದಾರೆ. ಟಿ-ಸಿರೀಸ್ ನಿರ್ಮಾಣದಲ್ಲಿ ಚಿತ್ರವು, ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರಲು ತಾತ್ಕಾಲಿಕವಾಗಿ ಸಿದ್ಧವಾಗಿದೆ. ಅದೇ ರೀತಿ, ಅಮೀರ್ ಖಾನ್ ಅಭಿನಯದ 'ಲಾಹೋರ್ 1947' ಕೂಡ ಯುದ್ಧಭೂಮಿ ಹಿನ್ನೆಲೆಯನ್ನು ಆಧರಿಸಿದೆ. ಯುದ್ಧಕ್ಕೆ ಸಂಬಂಧಿತ ಕಥೆಗಳಲ್ಲಿ ಒಂದಷ್ಟು ನೈಜ ಕಥೆಗಳನ್ನು ಆಧರಿಸಿದ್ದರೆ, ಇನ್ನೂ ಕೆಲವು ಕಾಲ್ಪನಿಕ ಸ್ಟೋರಿಗೆ ಸೇರಿವೆ. ಇಷ್ಟು ವರ್ಷಗಳ ಕಾಲ ಹೆಚ್ಚಾಗಿ ಲವ್​ ಜಾನರ್​ಗಳ ಹಿಂದೆ ಬಿದ್ದಿದ್ದ ಹಿಂದಿ ಚಿತ್ರೋದ್ಯಮ, ಇದೀಗ ಆ್ಯಕ್ಷನ್​ಗೆ ಹೆಚ್ಚು ಒತ್ತು ನೀಡಿರುವುದು ಗಳಿಕೆಯ ಲೆಕ್ಕಾಚಾರವನ್ನು ಬದಲಿಸಲಿದೆಯಾ? ಏನಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು,(ಏಜೆನ್ಸೀಸ್). ​ ​​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net