ಆ 7 ಸೆಲೆಬ್ರಿಟಿಗಳೂ, ಅವರ ಸಾವಿನ ವದಂತಿಗಳು….

poonam
Published on

ಮುಂಬೈ: ನಿನ್ನೆ (ಶುಕ್ರವಾರ) ಬೆಳಗ್ಗೆಯಿಂದ ಪೂನಂ ಪಾಂಡೆ ನಿಧನದ ಸುದ್ದಿ ಹರಿದಾಡುತ್ತಿತ್ತು. ಪೂನಂ ಇನ್‌ಸ್ಟಾಗ್ರಾಮ್‌ ಪೇಜ್​​​​​ನಲ್ಲಿ ಪೋಸ್ಟ್ ಹಂಚಿಕೊಂಡು, ಪೂನಂ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಆದರೀಗ ಸ್ವತಃ ಪೂನಂ ವಿಡಿಯೋ ರಿಲೀಸ್ ಮಾಡಿ, ತನ್ನ ಸಾವಿನ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ವಿಪರ್ಯಾಸವೆಂದರೆ ಈ ಹಿಂದೆಯೂ ಅನೇಕ ಬಾಲಿವುಡ್​​​ ಸೆಲೆಬ್ರಿಟಿಗಳ ಸಾವಿನ ಸುದ್ದಿ ವೈರಲ್ ಆಗಿತ್ತು. ಆ ನಂತರ ಅವರು ಬದುಕಿದ್ದಾರೆ, ಸಾವಿನ ಸುದ್ದಿ ಕೇವಲ ವದಂತಿ ಎಂಬುದು ಸ್ಪಷ್ಟವಾಗಿತ್ತು. ಈ ಕುರಿತಾದ ಚಿಕ್ಕ ಮಾಹಿತಿ ಇಲ್ಲಿದೆ ನೋಡಿ...

ಪೂನಂ ಪಾಂಡೆ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​​ನಲ್ಲಿರುವ ಸುದ್ದಿ ಪೂನಂ ಬದುಕಿರುವುದು. ಹೌದು, ನಿನ್ನೆಯವರೆಗೆ ಪೂನಂ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು, ಆದರೀಗ ಸ್ವತಃ ಅವರೇ ತಾವು ಬದುಕಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಕೇವಲ ವದಂತಿಯಾಗಿದೆ.

ಶಾರೂಖ್
2017ರಲ್ಲಿ ಕಿಂಗ್ ಖಾನ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ನಂತರ ಇದು ವದಂತಿ ಎಂದು ತಿಳಿದುಬಂದಿತು.

ಅಮಿತಾಬ್ ಬಚ್ಚನ್
ಬಿಗ್​​​ ಬಿ ಅಮೆರಿಕದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು.

ಆಯುಷ್ಮಾನ್ ಖುರಾನಾ
2013ರಲ್ಲಿ ಆಯುಷ್ಮಾನ್ ಸ್ವಿಟ್ಜರ್​​​​ಲೆಂಡ್​​ನಲ್ಲಿ ಸ್ನೋಬೋರ್ಡಿಂಗ್ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂಬ ಸುದ್ದಿ ವರದಿಯಾಗಿತ್ತು.

ಮುಮ್ತಾಜ್
ಬಾಲಿವುಡ್​​​ನ ಸುಂದರ ನಟಿ ಮುಮ್ತಾಜ್ ಸಾವಿನ ಸುದ್ದಿಯೂ ಈ ಹಿಂದೆ ವೈರಲ್ ಆಗಿತ್ತು.

ಮಾಧುರಿ ದೀಕ್ಷಿತ್
2013ರಲ್ಲಿ ಬಾಲಿವುಡ್​​​ನ ಧಕ್ ಧಕ್ ಬೆಡಗಿ ಮಾಧುರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು.

ಫರೀದಾ ಜಲಾಲ್​​​
ಫರೀದಾ ಜಲಾಲ್​​​ ಸಾವಿನ ವದಂತಿಯು ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹಬ್ಬಿತ್ತು. ಆದರೆ ನಂತರ ಈ ಸುದ್ದಿ ಸುಳ್ಳು ಎಂದು ವರದಿಯಾಯ್ತು.

ರಜನಿಕಾಂತ್ 
ಇನ್ನು ರಜನಿಕಾಂತ್ ಸಾವಿನ ಸುದ್ದಿ, ಒಂದಲ್ಲ ಹಲವು ಬಾರಿ ಹರಿದಾಡಿದ್ದವು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net