

ಮುಂಬೈ: ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪದ ಮೇಲೆ ಬಾಲಿವುಡ್ ಕಾಸ್ಟಿಂಗ್ ಡೈರೆಕ್ಟರ್ (ಪಾತ್ರಗಳ ಬಗ್ಗೆ ಕಲಾವಿದರಿಗೆ ವಿವರಿಸುವವ) ಓರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಾಸ್ಟಿಂಗ್ ನಿರ್ದೇಶಕ ನವೀನ್ ಕುಮಾರ್ ಪ್ರೇಮಲಾಲ್ ಆರ್ಯಾ ಎಂಬಾತನನ್ನು ಬಂಧಿಸಿದ ಮುಂಬೈ ಪೊಲೀಸ್ ಸಾಮಾಜಿಕ ಸೇವಾ ಬ್ರ್ಯಾಂಚ್ ಅಧಿಕಾರಿಗಳು ಇಬ್ಬರು ಜ್ಯೂನಿಯರ್ ಆರ್ಟಿಸ್ಟ್ಗಳನ್ನು ರಕ್ಷಣೆ ಮಾಡಿದ್ದಾರೆ.
ನವೀನ್ ಕುಮಾರ್ ಕಳೆದ 5 ವರ್ಷಗಳಿಂದಲೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಆತನ ಸ್ನೇಹಿತರಾದ ಅಜಯ್ ಶರ್ಮಾ ಮತ್ತು ವಿಜಯ್ ಎಂಬುವರು ಸಹಾಯ ಮಾಡುತ್ತಿದ್ದರು. ಈತ ಓರ್ವ ಮಹಿಳೆಗೆ 60,000ರೂ.ಬೆಲೆ ಕಟ್ಟುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾಮಿಕ ವ್ಯಕ್ತಿಯೋರ್ವರು ನೀಡಿದ ಸುಳಿವಿನ ಆಧಾರದ ಮೇಲೆ ಎಸ್ಎಸ್ಬಿ ಇನ್ಸ್ಪೆಕ್ಟರ್ ಸಂದೇಶ್ ರೇವಾಲೆ ಅವರು ನವೀನ್ಕುಮಾರ್ನನ್ನು ಬಂಧಿಸಲು ಯೋಜನೆ ರೂಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ, ನಮ್ಮೊಂದಿಗೆ ಕೈಜೋಡಿಸಿದ ವ್ಯಕ್ತಿಯೋರ್ವ ನವೀನ್ ಕುಮಾರ್ಗೆ ಕರೆ ಮಾಡಿದ್ದರು. ಅಂತೆಯೇ ಸಿನಿಮಾ ಇಂಡಸ್ಟ್ರಿಯಲ್ಲಿ ರೂಪದರ್ಶಿ ಹಾಗೂ ಕಲಾವಿದರಾಗಿ ಕೆಲಸ ಮಾಡುತ್ತಿರುವ ಇಬ್ಬರು ಹುಡುಗಿಯರನ್ನು ಕಳಿಸಲು ಆತ ಒಪ್ಪಿಕೊಂಡ. ಅದಕ್ಕಾಗಿ ಆತ ಒಬ್ಬೊಬ್ಬೊರಿಗೂ 60,000 ರೂ.ಬೇಡಿಕೆ ಇಟ್ಟ. ಹಾಗೇ ಹೋಟೆಲ್ನಲ್ಲಿ ಅಡ್ವಾನ್ಸ್ ಆಗಿ ರೂಂ ಬುಕ್ ಮಾಡಲು ತಿಳಿಸಿದ.
ನವೀನ್ ಕುಮಾರ್ ಹೇಳಿದಂತೆ ಇಬ್ಬರು ಹುಡುಗಿಯರೊಂದಿಗೆ ಮೊದಲೇ ಹೇಳಿದ ಸ್ಥಳಕ್ಕೆ ಬಂದ. ನಾವು ಕೂಡಲೇ ಆತನನ್ನು ಬಂಧಿಸಿದೆವು ಎಂದು ತಿಳಿಸಿದ್ದಾರೆ.
ಕಾಸ್ಟಿಂಗ್ ಡೈರೆಕ್ಟರ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ದೆಹಲಿಯ ಯುವತಿಯೋರ್ವಳು ವೇಶ್ಯಾವಾಟಿಕೆ ದಂಧೆಯಲ್ಲಿ ಸಕ್ರಿಯವಾಗಿದ್ದು ಗೊತ್ತಾಗಿದೆ ಎಂದಿದ್ದಾರೆ. (ಏಜೆನ್ಸೀಸ್)