ಬಾಲಿವುಡ್ ನಟಿ ಕತ್ರಿನಾ ಕೈಫ್ ತಾಯಿಯಾದ ಬಳಿಕ ಮತ್ತೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕಳೆದ ನ. 7ರಂದು ‘ವಿಹಾನ್ ಕೌಶಲ್’ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು, ಸದ್ಯ ಮಗುವಿನ ಪೋಷಣೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿಯಾದ ಬಳಿಕ ಕತ್ರಿನಾ ಚಿತ್ರರಂಗದಿಂದ ದೂರ ಉಳಿದಿದ್ದರು. ಇನ್ನು ಇತ್ತೀಚೆಗೆ ವೆಬ್ ಸರಣಿಯೊಂದರ ಮೂಲಕ ಬಾಲಿವುಡ್‌ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದನ್ನು ನಟಿಯ ತಂಡ ನಿರಾಕರಿಸಿತ್ತು. ಇದರ ಬೆನ್ನಲ್ಲೇ, ಕತ್ರಿನಾ ಕೈಫ್ ತೆಲುಗಿನ ಬಹುನಿರೀಕ್ಷಿತ ಸಿನಿಮಾದ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು, ಪ್ರಭಾಸ್ ನಟನೆಯ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಲ್ಲಿ ಕತ್ರಿನಾ ನಟಿಸಲಿದ್ದಾರೆ. ಆದರೆ, ಹೀರೋಯಿನ್ ಆಗಿ ಅಲ್ಲ, ಬದಲಾಗಿ ಅದೊಂದು ಅತಿಥಿ ಪಾತ್ರವಾಗಿರಲಿದೆ ಎನ್ನಲಾಗುತ್ತಿದೆ. ಸ್ವಲ್ಪ ಹೊತ್ತು ಕಾಣಿಸಿಕೊಂಡರು, ಪಾತ್ರ ಪ್ರಮುಖವಾಗಿರಲಿದ್ದು, ಕಥೆಯ ನಿರ್ಣಾಯಕ ಹಂತದಲ್ಲಿ ಕತ್ರಿನಾ ಪ್ರವೇಶ ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಇನ್ನು ‘ಸ್ಪಿರಿಟ್’ನಲ್ಲಿ ಪ್ರಭಾಸ್‌ಗೆ ನಟಿ ತೃಪ್ತಿ ದಿಮ್ರಿ ಜೋಡಿಯಾಗಿದ್ದಾರೆ. ಈ ಮೊದಲು ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದರೂ, ಆದರೆ, ಕೆಲ ಕಾರಣಗಳಿಂದಾಗಿ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದರು. ಹಾಗಾಗಿ, ಸಿನಿಮಾಕ್ಕೆ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತರುವ ಕಾರಣಕ್ಕಾಗಿ ಕತ್ರಿನಾ ಕೈಫ್ರನ್ನು ಆಯ್ಕೆ ಮಾಡಲಾಗಿದೆಯಂತೆ. ಕತ್ರಿನಾ ಎಂಟ್ರಿ ಬಗ್ಗೆ ಚಿತ್ರತಂಡ ಇನ್ನಷ್ಟೇ ಖಚಿತಪಡಿಸಬೇಕು. ‘ಸ್ಪಿರಿಟ್’ ಚಿತ್ರದ ಶೇ.40ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, 2027ರ ಮಾರ್ಚ್ 5ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.-ಏಜೆನ್ಸೀಸ್