

ಮುಂಬೈ: ನಟ ರಾಘವ್ ಲಾರೆನ್ಸ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಚಂದ್ರಮುಖಿ 2' ಸಿನಿಮಾ ನಿರೀಕ್ಷಿಸಿದಂತೆ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸದೇ ಹೋದರೂ, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಈ ಚಿತ್ರದ ಬೆನ್ನಲ್ಲೇ ಇದೀಗ ನಟಿ ತಾವು ಅಭಿನಯದ ಮತ್ತೊಂದು ಸಿನಿಮಾದ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಲ್ಲ ಒಂದು ವಿಚಾರಗಳಿಗೆ ನೇರವಾಗಿ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗುವ ಕಂಗನಾ ರಣಾವತ್, ತಮ್ಮ ಮುಂಬರುವ 'ತೇಜಸ್' ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸರ್ವೇಶ್ ಮೇವಾರ ನಿರ್ದೇಶನದ ಈ ಚಿತ್ರದಲ್ಲಿ ಕಂಗನಾ ತೇಜಸ್ ಗಿಲ್ ಎಂಬ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ತೇಜಸ್' ಇದೇ ಅಕ್ಟೋಬರ್ 27 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಅಕ್ಟೋಬರ್ 08, ಏರ್ ಫೋರ್ಸ್ ದಿನದಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ,(ಏಜೆನ್ಸೀಸ್).