ಮ್ಯಾಜಿಕ್ ವ್ಯೂಹದಲ್ಲಿ ದಿಶಾ : ಹಾಲಿವುಡ್‌ನ ಡೆಬ್ಯೂ ‘ದ ಪೋರ್ಟಲ್ ಆಫ್​ ಫೋರ್ಸ ಚಿತ್ರದ ಕೇಂದ್ರಬಿಂದುವಾದ ನಟಿ

ದಿಶಾ ಪಟಾನಿ
ದಿಶಾ ಪಟಾನಿ
Published on

ಪ್ರಮುಖ ಮುಖ್ಯಾಂಶಗಳು

  • ಹಾಲಿವುಡ್ ಗೆ ಪದಾರ್ಪಣೆ ಮಾಡಿದ ದಿಶಾ ಪಟಾನಿ
  • ಟ್ರೇಲರ ನಲ್ಲಿ ಮಿಂಚಿದ ನಟಿ
  • ಜೆಸ್ಸಿಕಾ ಎಂಬ ಪಾತ್ರದಲ್ಲಿದ್ದು, ಚಿತ್ರದ ಕಥೆಯ ಪ್ರಮುಖ ಕೇಂದ್ರಬಿಂದುವಾದ ನಟಿ
ಹಿಂದಿಯ ‘ಎಂ.ಎಸ್.ಧೋನಿ’ ಅನ್‌ಟೋಲ್ಡ್ ಸ್ಟೋರಿ’, ‘ಬಾಘಿ’ ಸರಣಿ ಸೇರಿ ತೆಲುಗು, ತಮಿಳಿನ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ದಿಶಾ ಪಟಾನಿಗೆ ಸಲ್ಲುತ್ತದೆ. ಆ್ಯಕ್ಷನ್ ಮತ್ತು ಗ್ಲಾಮರ್ ಪಾತ್ರಗಳಿಂದಲೇ ಬಾಲಿವುಡ್‌ನಲ್ಲಿ ಹೆಜ್ಜೆ ಗುರುತು ಮೂಡಿಸಿರುವ ದಿಶಾ, ಇದೀಗ ‘ದ ಪೋರ್ಟಲ್ ಆಫ್ ಫೋರ್ಸ್​ ಮೂಲಕ ಹಾಲಿವುಡ್‌ಗೆ ಎಂಟ್ರಿಯಾಗುತ್ತಿರುವುದು ಗೊತ್ತೇ ಇದೆ. ಕಳೆದ ವರ್ಷ ಪ್ರತಿಷ್ಠಿತ ಕಾನ್ಸ್, ಬರ್ಲಿನ್ ಫಿಲಂ ಫೆಸ್ಟಿವಲ್‌ಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ಇದೀಗ ವಿಶ್ವಾದ್ಯಂತ ತೆರೆ ಮೇಲೆ ಬರಲು ಸಿನಿಮಾ ಸಿದ್ಧವಾಗುತ್ತಿದ್ದು, ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಲಾಗಿದೆ. ಇಡೀ ಟ್ರೇಲರ್ ಆ್ಯಕ್ಷನ್‌ನಿಂದ ಕೂಡಿದ್ದು, ಅದರಲ್ಲಿ ದಿಶಾ ಪಟಾನಿ ಮ್ಯಾಜಿಕ್ ವ್ಯೆಹದಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿ ನಟಿ, ಜೆಸ್ಸಿಕಾ ಎಂಬ ಪಾತ್ರದಲ್ಲಿದ್ದು, ‘ಸ್ಟಾಟಿಗಾರ್ಡ್ ಮತ್ತು ಹೋಲಿಗಾರ್ಡ್‌ಗಳ ನಡುವಿನ ಯುದ್ಧದಲ್ಲಿ ಅವರು ಸಿಲುಕಿಕೊಂಡಿದ್ದಾರೆ. ಈ ಎರಡು ಬಣಗಳಲ್ಲಿ ಜೆಸ್ಸಿಕಾ (ದಿಶಾ) ಯಾರನ್ನು ಬೆಂಬಲಿಸುತ್ತಾಳೆ ಎಂಬುದೇ ಸಿನಿಮಾ ಕುತೂಹಲ. ಈ ಮೂಲಕ ದಿಶಾ ಹಾಲಿವುಡ್ ಚಿತ್ರದ ಕಥೆಯ ಕೇಂದ್ರಬಿಂದುವಾಗಿದ್ದಾರೆ. ಇನ್ನು ಈ ಮೊದಲು ಈ ಚಿತ್ರಕ್ಕೆ ‘ಹೋಲಿಗಾರ್ಡ್ ಸಾಗಾ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು. ಇದೀಗ ಶೀರ್ಷಿಕೆ ಬದಲಾಗಿದ್ದು, ‘ದ ಪೋರ್ಟಲ್ ಫೋರ್ಸ್’ ಎಂದು ನಿಗದಿ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಕೆವಿನ್ ಸ್ಪೇಶಿ ನಿರ್ದೇಶನ ಈ ಚಿತ್ರಕ್ಕಿದ್ದು, ‘ಸ್ಟಾಟಿಗಾರ್ಡ್ಸ್ ವರ್ಸಸ್ ಹೋಲಿಗಾರ್ಡ್ಸ್’ ಸರಣಿಯ ಮೊದಲ ಭಾಗ ಇದಾಗಿದೆ. ದಿಶಾ ಜತೆ ಕೆವಿನ್ ಸ್ಪೇಶಿ, ಟೈರೀಸ್ ಗಿಬ್ಸನ್, ಡಾಲ್ಫ್ ಲುಂಡ್‌ಗ್ರನ್, ಎರಿಕ್ ರಾಬರ್ಟ್ಸ್, ಬ್ರಿಯಾನಾ ಹಿಲ್ಡೆಬ್ರಾಂಡ್ ತಾರಾಗಣದಲ್ಲಿದ್ದಾರೆ. - ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net