100 ಕೋಟಿ ರೂ. ಏನೂ ಅಲ್ಲ! : ಯುವ ನಟಿಯರ ಪ್ರಚಾರ ದಾಹಕ್ಕೆ ಬಾಲಿವುಡ್ ನಟಿ ಅಮಿಷಾ ಪಟೇಲ್ ಟಾಂಗ್

ಅಮೀಷಾ ಪಟೇಲ್​
ಅಮೀಷಾ ಪಟೇಲ್​
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾಗಳಿಗಿಂತ ಪ್ರಚಾರ ಪಡೆಯುವ ನಟಿಯರಿಗೆ ತಿವಿದ ಬಾಲಿವುಡ್ ನಟಿ
  • ಇವರ ಪ್ರಚಾರಕ್ಕೆ 100 ಕೋಟಿ ರೂ. ಏನು ಅಲ್ಲ ಎಂದು ಟಾಂಗ್​
  • ಜಾಲತಾಣದಲ್ಲಿ ಸರಣಿ ಪೋಸ್ಟ್ ಮೂಲಕ ಅಸಮಾಧಾನ
ಇಂದಿನ ಯುವ ನಟ-ನಟಿಯರು ನಟನೆ, ಸಿನಿಮಾಗಿಂತ ಪ್ರಚಾರದ ಮೂಲಕ ಹೆಚ್ಚು ಸದ್ದು ಮಾಡುತ್ತಾರೆ ಎಂಬ ವಾದವಿದೆ. ಪ್ರಚಾರ ಪಡೆಯಲು ತಮ್ಮದೇ ಆದ ತಂಡ ಕಟ್ಟಿಕೊಂಡು ನಿರಂತರ ಪ್ರಚಾರ ಪಡೆಯುವುದನ್ನು ಗಮನಿಸಿರುತ್ತೇವೆ. ಒಂದೆರೆಡು ಚಿತ್ರಗಳಲ್ಲಿ ನಟಿಸಿ, ಕೈಯಲ್ಲಿ ಯಾವ ಸಿನಿಮಾಗಳು ಇರಲಿಲ್ಲದಿದ್ದರೂ, ಪ್ರಚಾರದ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಇಂತಹ ಮನಸ್ಥಿತಿಯ ಯುವ ತಾರೆಯರಿಗೆ ಬಾಲಿವುಡ್ ನಟಿ ಅಮಿಷಾ ಪಟೇಲ್ ಟಾಂಗ್ ನೀಡಿದ್ದು, ಕಲಾವಿದರ ಪ್ರಚಾರ ದಾಹಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ, ‘ಕೆಲ ನಟಿಯರು ವೃತ್ತಿ ಜೀವನದಲ್ಲಿ ಒಂದೇ ಒಂದು 200 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡಿದ ಸಿನಿಮಾದಲ್ಲಿ ನಟಿಸಿರುವುದಿಲ್ಲ. ಆದರೆ, ತಮ್ಮದೇ ಪ್ರಚಾರ ತಂಡದಿಂದ ತಮಗೆ ತಾವೇ ನಂ. 1 ಹಾಗೂ ನಂ. 2 ಎಂದು ಕರೆದುಕೊಳ್ಳುತ್ತಾರೆ. ಹಾಗೆಯೇ, ಹಣ ಕೊಟ್ಟು ಸ್ಟಾರ್ ಆಗುತ್ತಾರೆ. 2000ದ ಸಮಯದಲ್ಲಿ ಈ ರೀತಿ ಇರಲಿಲ್ಲ. ಆದರೆ, ಈಗೀಗ ಇಂತಹ ಪ್ರಚಾರಪ್ರಿಯರೇ ಹೆಚ್ಚಾಗಿದ್ದಾರೆ. ಇಂದು 100 ಕೋಟಿ ರೂ. ಏನೂ ಅಲ್ಲ’ ಎಂದು ಪರೋಕ್ಷವಾಗಿ ಪ್ರಚಾರ ಬಯಸುವ ನಟಿಯರಿಗೆ 50 ವರ್ಷದ ಅಮಿಷಾ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿಯ ‘ಕಹೋ ನಾ ಪ್ಯಾರ್ ಹೈ’, ‘ಗದರ್: ಏಕ್ ಪ್ರೇಮ್ ಕಥಾ’ ಸೇರಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅಮಿಷಾ 2024ರ ‘ತೌಬಾ ತೇರಾ ಜಲ್ವಾ’ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net