ಮತ್ತೊಬ್ಬ ಬಾಲಿವುಡ್​ ನಟನಿಗೆ ಕರೊನಾ ಪಾಸಿಟಿವ್​

karthik Aryan
Published on

ಮುಂಬೈ: ಇತ್ತೀಚೆಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ಕೋವಿಡ್​ ಸೋಂಕು ತಗುಲಿತ್ತು, ಇದೀಗ ಮತ್ತೊಬ್ಬ ನಟನಿಗೂ ಕರೊನಾ ದೃಢವಾಗಿದೆ.

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ಗೂ ಕರೊನಾ ಸೋಂಕು ತಗುಲಿದೆ ಎಂದು ಸ್ವತಃ ಅವರೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ನಟನೆಯ ಭೂಲ್​ ಭುಲಯ್ಯಾ 2 ಚಿತ್ರ ಯಶಸ್ಸಿನ ನಡುವೆ ಕಾರ್ತಿಕ್​ ಈಗ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗಿದ್ದಾರೆ.

ಇತ್ತೀಚೆಗೆ ಉತ್ತರ ಭಾರತದಾದ್ಯಂತ ಇದೇ ಚಿತ್ರ ಪ್ರಚಾರದಲ್ಲಿ ಕೈಗೊಂಡಿದ್ದ ವೇಳೆ ಅವರಿಗೆ ಈ ಸೋಂಕು ತಗುಲಿದೆ ಎನ್ನಲಾಗಿದೆ. ಸದ್ಯ ಕರೊನಾದಿಂದ ದೂರವಿರಿ, ಎಚ್ಚರಿಕೆ ವಹಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net