

ದುಬೈ: ಬಾಡಿ ಬಿಲ್ಡ್ ಮಾಡುವ ಕನಸು ಈಗಿನ ಯುವ ಸಮಾಜದಲ್ಲಿ ಸಾಮಾನ್ಯವೆನ್ನುವಂತಾಗಿದೆ. ಈ ಬಾಡಿ ಬಿಲ್ಡಿಂಗ್ ಸರಿಯಾದ ಕ್ರಮದಲ್ಲಿ ಮಾಡಿದರೆ ಒಳ್ಳೆಯದು. ಅದರಲ್ಲಿ ಚೂರು ಹೆಚ್ಚು ಕಡಿಮೆಯಾದರೂ ಯಾವ ರೀತಿಯ ಸಮಸ್ಯೆಯಾಗಬಹುದು ಎನ್ನುವುದಕ್ಕೆ ಈ ಘಟನೆ ಒಂದು ಸಾಕ್ಷಿ.
ದುಬೈನ ಬಾಡಿ ಬಿಲ್ಡರ್ ರಿಯಾನ್ ಕ್ರೌಲಿಯ ಕಥೆಯಿದು. ಇತ್ತೀಚೆಗೆ ಒಂದು ದಿನ ಜಿಮ್ನಲ್ಲಿ ಆತ ವರ್ಕ್ಔಟ್ ಮಾಡುವಾಗ ಆಗಬಾರದ್ದು ಆಗಿದೆ. ಸುಮಾರು 180 ಕೆಜಿ ತೂಕವನ್ನು ಎರಡೂ ಕೈಗಳಿಂದ ಎತ್ತುವಾಗ ಇದ್ದಕ್ಕಿದ್ದಂತೆ ಬಲಗೂ ಮಾಂಸ ಜಾರಿದೆ. ಒಂದೇ ಕಡೆಯಲ್ಲಿ ಹಿಡಿದುಕೊಂಡು ರಿಯಾನ್ ನೋವಿನಿಂದ ಬಳಲುವಂತಾಗಿದೆ. ಆತನ ಜತೆಗೆ ಆತನ ಟ್ರೈನರ್ ಕೂಡ ಇದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರಿಯಾನ್ನ ಕೈಗೆ ಆಪರೇಷನ್ ಮಾಡಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದೆಯಂತೆ. ತನ್ನ ಶಿಷ್ಯನ ಆಪರೇಷನ್ಗಾಗಿ ರಿಯಾನ್ನ ಟ್ರೈನರ್ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿದ್ದಾನೆ. ಸುಮಾರು 27 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆಯಂತೆ. ಆದರೆ ರಿಯಾನ್ ಮೊದಲಿನಂತಾಗಲು ಇನ್ನು ಸಾಕಷ್ಟು ತಿಂಗಳುಗಳು ಬೇಕಾಗಬಹುದು ಎಂದಿದ್ದಾರೆ ವೈದ್ಯರು. (ಏಜೆನ್ಸೀಸ್)