ನೀರುಪಾಲಾಗಿದ್ದ ಮತೊಬ್ಬ ಯುವಕನ ಶವ ಪತ್ತೆ

13-npk-1
ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡುವು ಎಂಬಲ್ಲಿ ಮೃತಪಟ್ಟ ಅಯ್ಯಪ್ಪ ಮೃತ ದೇಹ ನೀರಿನಿಂದ ಹೊರ ತೆಗೆದ ಸಂದರ್ಭ .
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಕಡಿಯತ್ತೂರಿನ ಬಳಿಯ ದೋಣಿ ಕಡವು ಕಾವೇರಿ ನದಿಯಲ್ಲಿ ಮುಳುಗಿ ಕಣ್ಮರೆಯಾಗಿದ್ದ ಅಯ್ಯಪ್ಪ (18) ಮೃತ ದೇಹ ಮಂಗಳವಾರ ಪತ್ತೆಯಾಗಿದೆ.

ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡುವು ಎಂಬಲ್ಲಿ ಸೋಮವಾರ ಕಾವೇರಿ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರು ದೋಣಿಯಲ್ಲಿ ತೆರಳುವ ಸಂದರ್ಭ ಆಕಸ್ಮಿಕವಾಗಿ ದೋಣಿ ಮಗುಚಿ ದುರ್ಘಟನೆ ನಡೆದಿತ್ತು. ಇವರ ಪೈಕಿ ಐವತ್ತೋಕ್ಲು ಗ್ರಾಮದ ಚಾರಂಡ ಕಾಲನಿ ನಿವಾಸಿ ಪರಮೇಶ (ಪುಟ್ಟ) ಮತ್ತು ವಿಮಲಾ ದಂಪತಿ ಪುತ್ರ ಗಿರೀಶ್ (16) ಹಾಗೂ ಚೇರಂಬಾಣೆ ಬಳಿಯ ಪಾಕ ನಿವಾಸಿ ವಿಠಲ ಹಾಗೂ ವೀಣಾ ದಂಪತಿ ಪುತ್ರ ಅಯ್ಯಪ್ಪ (18) ಇಬ್ಬರೂ ನೀರಲ್ಲಿ ಮುಳುಗಿ ಕಾಣೆಯಾಗಿದ್ದರು.

ಸ್ಥಳಕ್ಕೆ ಪೊಲೀಸ್,ಅಗ್ನಿಶಾಮಕ ಹಾಗೂ ಗ್ರಹ ರಕ್ಷಕ ಸಿಬ್ಬಂದಿ ಆಗಮಿಸಿ ಗಿರೀಶ್ (16) ಮೃತ ದೇಹ ನೀರಿನಿಂದ ಹೊರ ತೆಗೆದಿದ್ದರು. ಆದರೆ ಅಯ್ಯಪ್ಪ ಮೃತದೇಹದ ಶೋಧ ಕಾರ್ಯಕ್ಕೆ ಪ್ರತಿಕೂಲ ಹವಾಮಾನ ಉಂಟಾದ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಅವಘಡ ಸಂಭವಿಸಿದ ಸ್ಥಳದಲ್ಲಿ ಸುಮಾರು 15 ಅಡಿ ಆಳದಲ್ಲಿ ಯುವಕನ ಮೃತದೇಹ ದೊರೆತಿದೆ. ಗ್ರಾಮ ಪಂಚಾಯತಿ ಸದಸ್ಯ ಇಸ್ಮಾಯಿಲ್, ಉಬೈದ್, ಮತ್ತು ಮುಳುಗು ತಜ್ಞ ಮೂರ್ನಾಡು ನಿವಾಸಿ ಎಂ. ಆರ್. ಬಿಪಿನ್, ಜುಬೇರ್, ಇಬ್ರಾಹಿಂ, ಅಬ್ದುಲ್, ಅಬ್ದುಲ್ ರೆಹಮಾನ್, ಮುತ್ತಪ್ಪ ಇನ್ನಿತರರು ಯುವಕರ ಶವಗಳನ್ನು ಪತ್ತೆ ಹಚ್ಚಿ ಮೇಲೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್‌ಐ ಮಂಜುನಾಥ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net