ದೇಹ ದಂಡನೆಯಿಂದ ಆರೋಗ್ಯ ವೃದ್ಧಿ

IMG-20240220-WA0026
Published on

ಎಚ್.ಡಿ.ಕೋಟೆ : ಆರೋಗ್ಯ ಪಾಲನೆಗೆ ದೇಹ ದಂಡನೆ ಮಾಡಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು. ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಯಶು ಹೆಲ್ತ್ ಪಾಯಿಂಟ್ ಮಲ್ಟಿ ಜಿಮ್ ಸಂಸ್ಥೆ ಏರ್ಪಡಿಸಿದ್ದ ತಾಲೂಕು ಮತ್ತು ಜಿಲ್ಲಾ ಮಟ್ಟದ 14ನೇ ವರ್ಷದ ದೇಹದಾರ್ಡ್ಯ ಸ್ಪರ್ಧೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ದೇಹ ಸೌಂದರ್ಯಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ದೇಹವನ್ನು ದಂಡಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ ಎಂದರು. ದುಶ್ಚಟಗಳಿಂದ ದೂರವಾಗಿರಬೇಕು. ಆಹಾರ, ವಿಹಾರ ಕ್ರಮದಲ್ಲಿ ಶಿಸ್ತು ಇರಬೇಕು. ಆಗ ಮಾತ್ರ ನಾವು ರೋಗಗಳಿಂದ ದೂರವಿರಲು ಸಾಧ್ಯ ಎಂದರು.
ಮಿಸ್ಟರ್ ಏಷ್ಯಾ ಖ್ಯಾತಿಯ ದೇಹದಾರ್ಡ್ಯ ಪಟು ನಜೀಬ್ ಖಾನ್ ಮಾತನಾಡಿ, ದೇಹವನ್ನು ದಂಡಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಆದ್ದರಿಂದ 50 ವರ್ಷ ಮೇಲ್ಪಟ್ಟವರೂ ವ್ಯಾಯಾಮ ಮಾಡಿ ಆರೋಗ್ಯ ಮತ್ತು ಸೌಂದರ್ಯ ಪಾಲನೆಗೆ ಮಹತ್ವ ನೀಡಬಹುದು ಎಂದರು. ಇದೇ ಸಂದರ್ಭ ಅಂತಾರಾಷ್ಟ್ರೀಯ ಮಟ್ಟದ ಓಟ ವಿಭಾಗದಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದ ಪೊಲೀಸ್ ಇಲಾಖೆ ಸಿಬ್ಬಂದಿ ಸರಗೂರಿನ ಎಂ.ಡಿ. ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಸತೀಶ್‌ಗೆ ಮಿಸ್ಟರ್ ಮೈಸೂರು ಟ್ರೋಫಿ: ಜಿಲ್ಲಾ ಮಟ್ಟದ ವಿಭಾಗದಲ್ಲಿ ಮಿಸ್ಟರ್ ಮೈಸೂರು ಆಗಿ ಸತೀಶ್, ಬೆಸ್ಟ್ ಮಾಸ್ ಎಸ್.ಎಸ್. ಮಹದೇವಸ್ವಾಮಿ, ಬೆಸ್ಟ್ ಫೋಸರ್ ಆಗಿ ಎಸ್. ಪ್ರವೀಣ್ ಮತ್ತು ಮೋಸ್ಟ್ ಮಸ್ಕಲರ್ ಆಗಿ ಧನರಾಜ್ ಸರಗೂರು ಜಯಗಳಿಸಿದರು.ತಾಲೂಕು ಮಟ್ಟದ ವಿಭಾಗದಲ್ಲಿ ಮಿಸ್ಟರ್ ಕೋಟೆ ಆಗಿ ಉಲ್ಲಾಸ್, ಬೆಸ್ಟ್ ಮಾಸ್ ಆಗಿ ಸಂತು, ಬೆಸ್ಟ್ ಫೋಸರ್ ಆಗಿ ಪ್ರವೀಣ್ ಕುಮಾರ್ ಮತ್ತು ಮೋಸ್ಟ್ ಮಸ್ಕಲರ್ ಆಗಿ ಸಾತ್ವಿಕ್ ಟ್ರೋಫಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net