ಬಾಡಿ ಬಿಲ್ಡ್​ ಮಾಡೋಕೆ ಏನೇನೋ ಮಾಡಿದ; ಆಮೇಲಾಗಿದ್ದು ಕೇಳಿದರೆ ಗಾಬರಿಯಾಗೋದು ಗ್ಯಾರಂಟಿ

body
Published on

ಮಾಸ್ಕೋ: ಬಾಡಿ ಬಿಲ್ಡರ್​ಗಳ ಕಥೆ ಕೇಳತೀರದು. ದೇಹದ ಬಗ್ಗೆ ಅತಿ ಹೆಚ್ಚು ಆಸಕ್ತಿ ಕೊಡಲು ಹೋಗಿ ಏನೇನೋ ಸಮಸ್ಯೆಗಳಿಗೆ ಸಿಲುಕಿಕೊಳ್ಳುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ರಷ್ಯಾದ ಬಾಡಿ ಬಿಲ್ಡರ್​ ಒಬ್ಬ ಪಚೀತಿಗೆ ಸಿಲುಕಿರುವ ಕಥೆ ಇದು.

ರಷ್ಯಾದ ಕಿರಿಲ್ ತೆರೆಶಿನ್(24) ಬಾಡಿ ಬಿಲ್ಡಿಂಗ್​ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ. ತನ್ನ ದೇಹವನ್ನು ಹೆಚ್ಚು ಸದೃಢ ಮಾಡಿಕೊಳ್ಳಬೇಕು ಎನ್ನುವ ಆಸೆಯಿಂದ ಆತ ಪ್ರತಿದಿನ ಬೈಸೆಪ್ಸ್​ಗೆ ಪೆಟ್ರೋಲಿಯಂ ಜೆಲ್ಲಿ ಇಂಜೆಕ್ಷನ್​ ತೆಗೆದುಕೊಳ್ಳಲಾರಂಭಿಸಿದ್ದಾನೆ. ಆ ಪೆಟ್ರೋಲಿಯಂ ಜೆಲ್ಲಿಯಿಂದಾಗಿ ಬರುಬರುತ್ತಾ ಆತನ ತೋಳುಗಳು ಊದಿಕೊಳ್ಳಲಾರಂಭಿಸಿವೆ. ಅದೇ ಕಾರಣದಿಂದಾಗಿ ಆತನನ್ನು ಹಲವು ಕಡೆಗಳಲ್ಲಿ ಯಾವುದೋ ವಿಚಿತ್ರ ಪ್ರಾಣಿಯಂತೆ ನೋಡಲು ಜನರು ಆರಂಭಿಸಿದ್ದಾರೆ.

ಆನೆ ಕಾಲು ರೋಗ ಬಂದವರಿಗೆ ಕಾಲುಗಳು ಊದಿಕೊಳ್ಳುವಂತೆ ಕಿರಿಲ್​ನ ತೋಳುಗಳು ಊದಿಕೊಂಡಿವೆ. ಈಗಾಗಲೇ ಒಂದು ಆಪರೇಷನ್​ ಮಾಡಿ ಅದರಲ್ಲಿದ್ದ ಡೆಡ್​ ಸೆಲ್​ಗಳು ಮತ್ತು ಕೊಬ್ಬಿನಾಂಶವನ್ನು ತೆಗೆಯಲಾಗಿದೆ. ಆದರೆ ಇನ್ನೂ ಆಪರೇಷನ್​ಗಳನ್ನು ಮಾಡುವುದು ಬಾಕಿಯಿದೆ. ಕರೊನಾ ಹಿನ್ನೆಲೆಯಲ್ಲಿ ಆಪರೇಷನ್​ ಮಾಡಲು ಹಿಂಜರಿಯಲಾಗುತ್ತಿದೆ. ಆಪರೇಷನ್​ ಮಾಡದೆ ಹಾಗೇ ಬಿಟ್ಟರೆ ಆತ ಸಾಯಲೂಬಹುದು ಎನ್ನಲಾಗಿದೆ. ಕಿರಿಲ್​ನ ಕಷ್ಟಕ್ಕೆ ಕೆಲ ಸೆಲೆಬ್ರಿಟಿಗಳೂ ಮುಂದೆ ಬಂದು ಸಹಾಯ ಮಾಡಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net