ಬಾವಿಯಲ್ಲಿ 9 ವಲಸೆ ಕಾರ್ಮಿಕರ ಶವ ಪತ್ತೆ, ಒಂದೇ ಕುಟುಂಬದ ಐವರ ಆತ್ಮಹತ್ಯೆ!

SUICIDE
Published on

ವಾರಂಗಲ್ (ತಮಿಳುನಾಡು): ಇಲ್ಲಿಯ ಸಮೀಪದ ಗೋರೆಕುಂಟ ಗ್ರಾಮದ ಬಾವಿಯಲ್ಲಿ ಒಂಬತ್ತು ಮಂದಿಯ ಮೃತ ದೇಹ ಪತ್ತೆಯಾಗಿದ್ದು, ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಇವರ ಪೈಕಿ ಐವು ಮಂದಿ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಇವರೆಲ್ಲಾ ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ. ಆಲಮ್​ ಅವರ ಕುಟುಂಬ ಇದಾಗಿದ್ದು, ಹೆಂಡತಿ, ಇಬ್ಬರು ಮಕ್ಕಳು ಮತ್ತು ಮೂರು ವರ್ಷದ ಮೊಮ್ಮಗ ಎಂದು ಗುರುತಿಸಲಾಗಿದೆ.

ನಾಲ್ಕು ಶವ ಗುರುವಾರ ಪತ್ತೆಯಾಗಿತ್ತು, ಇಬ್ಬರು ಮಹಿಳೆಯರು ಸೇರಿ ಮೂರು ಮಂದಿಯ ಶವ ಇಂದು ಪತ್ತೆಯಾಗಿದೆ.

ವಲಸೆ ಕಾರ್ಮಿಕರಾಗಿದ್ದ ಎಲ್ಲರೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ಇವರ ಮೈಮೇಲೆ ಯಾವ ಗಾಯದ ಗುರುತುಗಳೂ ಇಲ್ಲ. ಈ ಹಿನ್ನೆಲೆಯಲ್ಲಿ ಇದು ಕೊಲೆ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಕಳೆದ 20 ವರ್ಷಗಳಿಂದ ಕುಟುಂಬ ಗೀಸಿಕೊಂಡ ಮಂಡಲದ ಗೊರೆಕುಂಟ ಪ್ರದೇಶದಲ್ಲಿ ವಾಸವಿದ್ದರು. ಅವರೆಲ್ಲರೂ ಸೆಣಬಿನ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಲಾಕ್‌ಡೌನ್ ಘೋಷಣೆಯಾದ ಬಳಿಕ ಮಿಲ್‌ನಲ್ಲಿರುವ ಕೊಠಡಿಯೊಂದರಲ್ಲಿ ಇವರು ವಾಸಿಸುತ್ತಿದ್ದರು. ಸಾವಿಗೆ ಆರ್ಥಿಕ ಸಂಕಷ್ಟವೇ ಕಾರಣ, ಅದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net