

ಹೈದರಾಬಾದ್: ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಚಿತ್ರವೊಂದು ತಯಾರಾಗಲಿರುವ ಸಂಗತಿ ಗೊತ್ತೇ ಇದೆ. ಮೈತ್ರಿ ಮೂವೀಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. 'ಡ್ರ್ಯಾಗನ್' ಎಂಬ ಹೆಸರು ಈ ಚಿತ್ರಕ್ಕೆ ಪರಿಗಣನೆಯಲ್ಲಿದೆ.
ದೇವರ ಚಿತ್ರ ಮುಗಿದ ನಂತರ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಉಳಿದ ನಟರು ಹಾಗೂ ತಂತ್ರಜ್ಞರ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ.
ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಅವರನ್ನು ಅಂತಿಮಗೊಳಿಸಲಾಗಿದೆಯಂತೆ. ವಿಲನ್ ಪಾತ್ರಕ್ಕೆ ಬಾಲಿವುಡ್ ನಟರೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ಸಮಾಲೋಚನೆಯೂ ಆರಂಭವಾಗಿದೆ.
ಸದ್ಯ, ನಿರ್ದೇಶಕರು ಹಿರಿಯ ನಟ ಬಾಬಿ ಡಿಯೋಲ್ ಜೊತೆ ಮಾತನಾಡುತ್ತಿದ್ದಾರೆ ಎಂದು ವರದಿಯಾಗಿದೆ. ಸದ್ಯ ಬಾಬಿ ಡಿಯೋಲ್ ದಕ್ಷಿಣ ಭಾರತದ ಸಿನಿಮಾದತ್ತ ಗಮನ ಹರಿಸಿದ್ದಾರೆ. ‘ಹರಿ ಹರ ವೀರಮಲ್ಲು’ ಸಿನಿಮಾದಲ್ಲಿ ಅವರು ಔರಂಗಜೇಬನ ಪಾತ್ರ ಮಾಡುತ್ತಿದ್ದಾರೆ. ಈಗ 'ಡ್ರಾಗನ್' ಕೂಡ ಒಪ್ಪುವ ಸಾಧ್ಯತೆಗಳಿವೆ.
ಸಂಭಾವನೆ ಮತ್ತು ದಿನಾಂಕಗಳು ಎಲ್ಲಾ ನಿಗದಿಯಾಗಿದೆ ಆದರೆ ಬಾಬಿ ಡಿಯೋಲ್ ಈ ಯೋಜನೆಗೆ ಬಂದರುವುದು ಖಚಿತ. ಎನ್ ಟಿಆರ್ ಸದ್ಯ ‘ದೇವರ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಗೋವಾದಲ್ಲಿ ಮಹತ್ವದ ಶೆಡ್ಯೂಲ್ ಮುಗಿಸಿ ಹೈದರಾಬಾದ್‌ಗೆ ಮರಳಿದ್ದರು.