ಸಮುದ್ರದ ಮಧ್ಯೆ ಮೀನುಗಾರಿಕೆಯ ದೋಣಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ!

Untitled design (84)
Published on

ಮಂಗಳೂರು: ಮಂಗಳೂರಿನ ಮಲ್ಪೆ ಕಡಲ ತೀರದ ಆಳ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರದಿಂದಾಗಿ ಮೀನುಗಾರಿಕೆಯ ದೋಣಿಯೊಂದು ಮಗುಚಿ ಬಿದ್ದ ಹಿನ್ನೆಲೆ ಐವರು ಮೀನುಗಾರರನ್ನು ಇದೀಗ ರಕ್ಷಣೆ ಮಾಡಲಾಗಿದೆ.

ಸಮುದ್ರದ ಆಳ ಭಾಗದಲ್ಲಿ ಮುಳುಗುತ್ತಿದ್ದ ಬೋಟ್‌ನಿಂದ ಐವರು ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿ ಬಂದ ಬೋಟ್‌ಮ್ಯಾನ್ ರಕ್ಷಿಸಿದ್ದಾರೆ. ಬೋಟ್ ಮಂಗಳೂರಿನಿಂದ ಮಲ್ಪೆ ಬಂದರಿಗೆ ತೆರಳುತ್ತಿದ್ದ ವೇಳೆ ಸಮುದ್ರದ ವಾತಾವರಣದಲ್ಲಿ ವೈಪರೀತ್ಯ ಉಂಟಾಗಿ ಸಮತೋಲನ ಕಳೆದುಕೊಂಡ ಕಾರಣ, ಮೀನುಗಾರರಿದ್ದ ಬೋಟ್​ ಅರ್ಧ ಮುಳುಗಡೆಯಾಗಿದೆ. ಮೀನುಗಾರರು ತಮಿಳುನಾಡು ಮೂಲದವರಾಗಿದ್ದು, ಮೀನುಗಾರಿಕೆಗಾಗಿ ಕರಾವಳಿಯತ್ತ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net