ಸುಮಾರು 34 ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆ; 12 ಜನ ನಾಪತ್ತೆ

Boat Carrying 34 School Going Children Capsizes In Muzaffarpur 12 Kids Missing Visuals Surface
Published on

ಬಿಹಾರ: ಮಕ್ಕಳ್ಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆಯಾದ ಘಟನೆ ಮುಜಾಫರ್​ಪುರ್​ನಲ್ಲಿ ನಡೆದಿದೆ. ಮುಂಜಾನೆ 10.30 -11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, 34 ಮಕ್ಕಳು ದೊಣಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಭಾಗಮತಿ ನದಿಯಲ್ಲಿ ನಡೆದ ಈ ದುರಂತದಲ್ಲಿ ಸುಮಾರು 12 ಮಕ್ಕಳು ನಾಪತ್ತೆಯಾಗಿದ್ದು, ಪ್ರಾಣ ಹಾನಿಯಾಗಿರಬಹುದೆಂದು ಹೆತ್ತವರು ಆತಂಕಗೊಂಡಿದ್ದಾರೆ. ಸದ್ಯ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ದೌಡಾಯಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಘಟನಾ ಸಂಬಂಧ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, " ಈಗಾಗಲೇ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ಹಾನಿಗೊಳಗಾದ ಮಕ್ಕಳ ಕುಟುಂಬದವರಿಗೆ ಸರ್ಕಾರ ಸಹಾಯ ಮಾಡಲಿದೆ" ಎಂದು ಆಶ್ವಾಸನೆ ನೀಡಿದ್ದಾರೆ.

ಮಕ್ಕಳೊಂದಿಗೆ ದೊಡ್ಡವರೂ ದೋಣಿಯಲ್ಲಿದ್ದರು. ಸಾಮರ್ಥ್ಯಕ್ಕೂ ಮೀರಿ ಜನರನ್ನು ದೋಣಿಯಲ್ಲಿ ತುಂಬಿಸಿದ್ದರಿಂದ ಅಪಘಾತ ಸಂಭವಿಸದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net