ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ನಾಡದೋಣಿ; ನಾಲ್ವರು ಮೀನುಗಾರರು ನಾಪತ್ತೆ

Boat
Published on

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ವಾಪಸ್ ಬರುವಾಗ ಬಂಡೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿಯ ಸಮುದ್ರದಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಈ ಸಾಗರಶ್ರೀ ಎಂಬ ಹೆಸರಿನ ನಾಡದೋಣಿಯಲ್ಲಿ ಒಟ್ಟು 10 ಮಂದಿ ಮೀನುಗಾರರು ಇದ್ದರು. ಅವರಲ್ಲಿ, ಉಪ್ಪುಂದದ ನಿವಾಸಿಗಳಾದ ಬಿ.ನಾಗ (46), ಲಕ್ಷ್ಮಣ (34), ಶೇಖರ ಜಿ.(35), ಮಂಜುನಾಥ್​ ಖಾರ್ವಿ (38) ನಾಪತ್ತೆಯಾದವರು. ಭಾರಿ ಮಳೆಯೂ ಇದ್ದುದರಿಂದ ಸಮುದ್ರದಲ್ಲಿ ಅಲೆಗಳ ಏರಿಳಿತ ಜಾಸ್ತಿಯಾಗಿತ್ತು. ನಿಯಂತ್ರಣ ತಪ್ಪಿ ಈ ದೋಣಿ ಅಪಘಾತಕ್ಕೀಡಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net