ಶ್ರೀರಾಮುಲುಗೆ ಶಾಕ್​ ಕೊಟ್ಟ ವಜಾಗೊಂಡ ಬಿಎಂಟಿಸಿ ನೌಕರ: ಸಾರಿಗೆ ಸಚಿವರ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಲು ಸಜ್ಜು

sriramulu
Published on

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾರಿಗೆ ಸಚಿವರ ವಿರುದ್ಧವೇ ಅಖಾಡಕ್ಕಿಳಿಯಲು ಕೆಲಸದಿಂದ ವಜಾಗೊಂಡ ಸಾರಿಗೆ ನೌಕರನೊಬ್ಬ ಸಜ್ಜಾಗಿದ್ದು, ಮೊಳಕಾಲ್ಮೂರು ಕ್ಷೇತ್ರ ಕುತೂಹಲ ಮೂಡಿಸಿದೆ.

ಶ್ರೀರಾಮುಲು ವಿರುದ್ಧ ಚುನಾವಣೆಗೆ ನಿಲ್ಲಲ್ಲು ರಾಮು.ಡಿ ರೆಡಿಯಾಗಿದ್ದು, 'ಸಾರಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಲಾಗದ ಸಾರಿಗೆ ಸಚಿವರಾದ ಶ್ರೀರಾಮುಲು ವಿರುದ್ಧವೇ ಮೊಳಕಾಲ್ಮೂರು ಕ್ಷೇತ್ರದಿಂದ ಸಾರಿಗೆ ಇಲಾಖೆಯ ಮಾಜಿ ನೌಕರ ರಾಮು ಡಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ' ಎಂಬ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಬಿಎಂಟಿಸಿ ಡಿಪೋ-20ರಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಮು, ಸಾರಿಗೆ ನೌಕಕರ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷದ ಎರಡನೇ ಬಾರಿಯ ಮುಷ್ಕರದಲ್ಲಿ ಪಾಲ್ಗೊಂಡು ಕೆಲಸದಿಂದ ವಜಾಗೊಂಡಿದ್ದರು, ಡಿಸ್ಮಿಸ್ ಆಗಿದ್ದರು. ಇದರಿಂದ ಬೇಸತ್ತ ರಾಮು, ಇದೀಗ ಸಾರಿಗೆ ಸಚಿವರ ವಿರುದ್ಧವೇ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ. ಸೋಶಿಯಲ್ ಮೀಡಿಯಾ, ಸಾರಿಗೆ ನೌಕರರ ಗ್ರೂಪ್​ ಮೂಲಕ ಪ್ರಚಾರ ಆರಂಭಿಸಿದ್ದಾರೆ. 'ಸಾರಿಗೆ ನೌಕರರು-ಕುಟುಂಬಸ್ಥರು ಹಾಗೂ ನಾಡಿನ ಜನತೆಯ ಆಶೀರ್ವಾದ ಬೇಡುತ್ತೇನೆ ಎಂದು ಮನವಿ ಮಾಡಿದ್ದಾರೆ'.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net