ಬಿಎಂಟಿಸಿ ಡಿಕ್ಕಿ : ಸಿವಿಲ್ ಕಂಟ್ರ್ಯಾಕ್ಟರ್ ಸಾವು

accident-15
Published on

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಭರತ್‌ರೆಡ್ಡಿ (೨೪) ಎಂಬ ಸಿವಿಲ್ ಕಂಟ್ರ್ಯಾಕ್ಟರ್ ಮೃತಪಟ್ಟಿದ್ದಾರೆ. ಅಟ್ಟೂರಿನ ಮದರ್ ಡೇರಿ ಬಳಿ ಬುಧವಾರ ಈ ದುರ್ಘಟನೆ ನಡೆದಿದೆ.
ಮತ್ತಿಕೆರೆ ನಿವಾಸಿಯಾದ ಭರತ್‌ರೆಡ್ಡಿ, ಅಟ್ಟೂರಿನಲ್ಲಿ ನಿರ್ಮಿಸುತ್ತಿರುವ ಕಟ್ಟಡ ಪರಿಶೀಲಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಸಂಜೆ ೫ ಗಂಟೆಯ ವೇಳೆ ಈ ಅವಘಡ ನಡೆದಿದೆ. ಬಿಎಂಟಿಸಿ ಬಸ್ ಹಿಂದಿನಿಂದ ಗುದ್ದಿದ್ದು ಈ ವೇಳೆ ನಿಯಂತ್ರಣ ತಪ್ಪಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಬಸ್‌ನ ಚಕ್ರ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಅಟ್ಟೂರಿನಿಂದ ಯಲಹಂಕಕ್ಕೆ ಹೋಗುತ್ತಿತ್ತು. ಘಟನಾ ಸಂದರ್ಭದಲ್ಲಿ ಭರತ್‌ರೆಡ್ಡಿ, ಹೆಲ್ಮೆಟ್ ಧರಿಸಿದ್ದರು. ಆದರೆ, ಬಸ್ ಹರಿದಿದ್ದರಿಂದ ಹೆಲ್ಮೆಟ್ ನಜ್ಜು ಗುಜ್ಜಾಗಿದೆ. ಚಾಲಕನನ್ನು ಬಂಧಿಸಿ ಬಸ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net