

ಬೆಂಗಳೂರು:
ಬೆಳವಣಿಗೆಯಾಗುತ್ತಿರುವ ಕೃತಕ ಬುದ್ದಿಮತ್ತೆ ಯುಗಕ್ಕೆ ಅನುಗುಣವಾಗಿ ಯುವ ಜನಾಂಗಕ್ಕೆ ನಗರದ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಲ್ಡ್ ವಿತ್ ಎಐ ಜೆಮಿನಿ 2.0 ಫ್ಲಾಶ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಂಡ್ ಮ್ಯಾಟ್ರಿಕ್ಸ್ ಮತ್ತು ಗೂಗಲ್ ಫಾರ್ ಡೆವಲಪರ್ಸ್ ಇಂಡಿಯಾ ಎಜು ಪ್ರೋಗ್ರಾಂ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಭಾಗವಹಿಸಿದ್ದರು.
ಈ ಮಹತ್ವದ ಪ್ರಯತ್ನದ ಬಗ್ಗೆ ಮೈಂಡ್ ಮ್ಯಾಟ್ರಿಕ್ಸ್ ನ ಸಿಇಒ ಸುಜಿತ್ ಕುಮಾರ್ ತಿಳಿಸಿದರು. ಎಸ್‌ಜೆಎಂ ವಿವಿ ಉಪಕುಲಪತಿ ಮತ್ತು ಮೈಂಡ್ ಮ್ಯಾಟ್ರಿಕ್ಸ್ ನ ಸಲಹೆಗಾರರಾದ ಡಾ.ಎಚ್.ಎಸ್. ಮೋಹನ್ ಕುಮಾರ್ ಅವರು ಕಾರ್ಯಾಗಾರದ ಉದ್ದೇಶವನ್ನು ತಿಳಿಸಿದರು.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್, ಬಿ.ಎಂ.ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ಭೀಮಶಾ ಆರ್ಯ, ಉಪ ಪ್ರಾಂಶುಪಾಲರಾದ ಡಾ. ರವಿಕುಮಾರ್, ಪ್ರಾಧ್ಯಾಪಕರಾದ ಡಾ.ಮೋಹನ್ ಕುಮಾರ್, ಮೈಂಡ್ ಮ್ಯಾಟ್ರಿಕ್ಸ ಅಮಿತಾಬ್ ಸತ್ಯಂ ನ ಸಲಹೆಗಾರರು ಕಾರ್ಯಾಗಾರದಲ್ಲಿ ಮಾತನಾಡಿದರು.
ಬಿ.ಎಂ.ಎಸ್.ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ ಅವಿರಾಮ್ ಶರ್ಮಾ ಅಧ್ಯತೆ ವಹಿಸಿದ್ದರು. ತಿರುಮಲ ದೇಸಾಯಿರವರು (ಮೈಂಡ್ ಮ್ಯಾಟ್ರಿಕ್ಸ್) ಕಾರ್ಯಾಗಾರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಗೂಗಲ್ ಜೆಮಿನಿ 2.0 ಮತ್ತು ಎಐ ಸ್ಟುಡಿಯೋ ಬಳಸಿ ಪ್ರಾಯೋಗಿಕ ತರಬೇತಿ ನೀಡಿದರು.