ರಷ್ಯಾದಿಂದ ಭಾರತ ರಕ್ತದ ಹಣ... ನಾಲಿಗೆ ಹರಿಬಿಟ್ಟ ಟ್ರಂಪ್​ ಸಹಾಯಕ ಪೀಟರ್​ ನವರೋ! | Blood Money

Untitled design - 2025-09-08T215324.064
Published on

Blood Money: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಭಾರತ 'ರಕ್ತದ ಹಣ' ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​​ ವ್ಯಾಪಾರ ಸಲಹೆಗಾರ ಪೀಟರ್ ನವರೊ ಹೇಳಿದ್ದಾರೆ. ಅಲ್ಲದೆ, ಯುಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲು ನವದೆಹಲಿ ಮಾಸ್ಕೋದಿಂದ ಅಷ್ಟೊಂದು ತೈಲವನ್ನು ಖರೀದಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪೀಟರ್​ ನವರೋ, '' ರಷ್ಯಾ ಯುಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಭಾರತ ರಷ್ಯಾದ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿರಲಿಲ್ಲ. ಇದು ರಕ್ತದ ಹಣ ಮತ್ತು ಜನರು ಸಾಯುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು," ಎಂದು ಪೋಸ್ಟ್​​ವೊಂದ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪೀಟರ್ ನವರೋ, ಭಾರತದ ವ್ಯಾಪಾರ ಮತ್ತು ವಿದೇಶಾಂಗ ನೀತಿಗಳನ್ನು ಪದೇ ಪದೇ ಟೀಕಿಸಿದ್ದು, ಅದರಲ್ಲೂ ವಿಶೇಷವಾಗಿ ರಷ್ಯಾದ ತೈಲದ ನಿರಂತರ ಆಮದನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಭಾರತವು ಸಂಪೂರ್ಣವಾಗಿ ಲಾಭಕ್ಕಾಗಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ ಎಂದು ಅವರು ಆರೋಪಿಸಿದರು. ಇದರಿಂದ ಬರುವ ಆದಾಯವು ನೇರವಾಗಿ ರಷ್ಯಾದ ಯುದ್ಧ ಯಂತ್ರವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net