ಹಲವರ ಜೀವ ಉಳಿಸುವ ರಕ್ತದಾನ

gdg
Published on

ಗದಗ: ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ನೀವು ನೀಡುವ ರಕ್ತ ಹಲವಾರು ಜೀವಗಳನ್ನು ಉಳಿಸಲು ಕಾರಣವಾಗುತ್ತದೆ. ಸ್ವಯಂಪ್ರೇರಣೆಯಿಂದ ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ರೋಟರಿ ಡಾ. ಎನ್.ಬಿ. ಪಾಟೀಲ ಹೇಳಿದರು.

ರೋಟರಿ ಸೆಂಟ್ರಲ್ ವತಿಯಿಂದ ನಗರದ ಸೇವಾಲಾಲ್ ಭವನದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಶಿಬಿರದಲ್ಲಿ 17 ಜನ ರಕ್ತದಾನ ಮಾಡಿದರು. 25 ಜನರ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು. ಚೇತನ ಅಂಗಡಿ, ರಾಜು ಉಮನಾಬಾದಿ, ಪ್ರಭು ಗಂಜಿಹಾಳ, ಮೋಹನ ಹುಲಕೋಟಿ, ವಿ. ಕೆ. ಗುರುಮಠ, ಮಲ್ಲಿಕಾರ್ಜುನ ಐಲಿ, ರಾಜು ಕುರಡಗಿ, ಶರಣಬಸಪ್ಪ ಗುಡಿಮನಿ, ಸಿ. ಬಿ.ಹಿರೇಗೌಡರ, ಶಶಿಧರ ದಿಂಡೂರ, ಎಂ. ಸಿ. ಬೇಲೇರಿ, ಎಂ. ಎಂ. ಬಡ್ನಿ, ಪ್ರಕಾಶ ಉಗಲಾಟದ, ಮಲ್ಲಿಕಾರ್ಜುನ ಚಂದಪ್ಪನವರ, ಎಸ್. ಐ. ಅಣ್ಣಿಗೇರಿ, ವಿಜಯಕುಮಾರ ಹಿರೇಮಠ, ಆರ್. ಬಿ. ದಾನಪ್ಪಗೌಡರ, ಸಂತೋಷ ತೋಟಗಂಟಿ, ಚಂದ್ರಗೌಡ ಹಿರೇಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net