ಎಲ್ಲ ದಾನಕ್ಕಿಂತ ರಕ್ತದಾನ ಅತ್ಯಂತ ಶ್ರೇಷ್ಠ

blood donation camp
ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯಲ್ಲಿ ರಕ್ತದಾನಿಗಳಿಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಧರಣೆಂದ್ರ ದಿನಕರ್ ಪ್ರಮಾಣಪತ್ರ ವಿತರಿಸಿದರು. ಡಾ. ಹೆಮ್ಲಾ ನಾಯಕ್, ಡಾ. ಕೆ.ಸಿ.ಶಶಿಧರ್, ಡಾ. ಪ್ರಿಯಾ ಕಿವಡಸಣ್ಣವರ, ಆತ್ರೇಯ, ಡಾ. ನಿಂಗರಾಜು, ಡಾ. ಎಂ.ಶಿಲ್ಪಾ ಇದ್ದರು.
Published on

ಶಿವಮೊಗ್ಗ: ಸಸ್ಯಗಳಿಗೆ ಕೊರೊಫಿಲ್ ಯಾವ ರೀತಿ ಅತ್ಯವಶ್ಯಕತೆ ಇದೆಯೋ ಅದೇ ರೀತಿ ಮನುಷ್ಯನಿಗೂ ರಕ್ತ ತುಂಬ ಅವಶ್ಯಕ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಹೆಮ್ಲಾ ನಾಯಕ್ ಹೇಳಿದರು.

ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ದಾನಕ್ಕಿಂತ ರಕ್ತ ದಾನ ಮಾಡುವುದು ಅತ್ಯಂತ ಶ್ರೇಷ್ಠ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಧರಣೆಂದ್ರ ದಿನಕರ್ ಮಾತನಾಡಿದರು. ವಿಶೇಷ ಅಧಿಕಾರಿ ಡಾ. ಕೆ.ಸಿ.ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ 79 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ರಕ್ತದಾನ ಮಾಡಿದರು. ರೆಡ್ ಕ್ರಾಸ್ ಘಟಕದ ನೋಡಲ್ ಆಫೀಸರ್ ಡಾ. ಪ್ರಿಯಾ ಕಿವಡಸಣ್ಣವರ ಕಾರ್ಯಕ್ರಮದ ಸಂಯೋಜಿಸಿದ್ದರು. ಹಣಕಾಸು ನಿಯಂತ್ರಣಾಧಿಕಾರಿ ಆತ್ರೇಯ, ನಿಲಯ ಪಾಲಕರಾದ ಡಾ. ನಿಂಗರಾಜು, ಡಾ. ಎಂ.ಶಿಲ್ಪಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net