ದಾನಗಳಲ್ಲಿ ರಕ್ತದಾನ ಶ್ರೇಷ್ಠ: ಡಾ. ಬಿ.ಜಿ.ಚನ್ನಪ್ಪ

blood donation camp
ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಡಾ. ಬಿ.ಜಿ.ಚನ್ನಪ್ಪ, ಡಾ.ರೇಷ್ಮಾ, ಜಿ.ವಿಜಯಕುಮಾರ್, ಡಾ. ಸೋಮಶೇಖರ್, ಡಾ. ಸುಧಾಕರ್, ಡಾ. ಎಸ್.ಎಚ್.ಪ್ರಸನ್ನ, ಎಚ್.ಟಿ.ಜಯಕೀರ್ತಿ, ಡಾ. ಬಿ.ಎಂ.ಚಂದ್ರಶೇಖರ್, ಕೆ.ಪಿ.ಪವಿತ್ರಾ, ಡಾ. ಸಕ್ರಿಯ ನಾಯಕ, ಡಾ. ಪೂರ್ಣಿಮಾ, ಆರ್.ಗಿರೀಶ್, ಧರಣೇಂದ್ರ ದಿನಕರ್ ಇದ್ದರು.
Published on

ಶಿವಮೊಗ್ಗ: ದಾನಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಾನವು ರಕ್ತದಾನ ಆಗಿದ್ದು, ದಾನಿಗಳಿಂದ ಸಂಗ್ರಹಿಸಿದ ರಕ್ತವು ಇನ್ನೊಬ್ಬರ ಪ್ರಾಣ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಚನ್ನಪ್ಪ ಹೇಳಿದರು.

ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಎನ್‌ಎಸ್‌ಎಸ್ ಘಟಕ, ರೋವರ್ಸ್ ರೆಂಜರ್ಸ್, ಸಮಾಜಶಾಸ್ತ್ರ ವಿಭಾಗದಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು ಎಂದರು.
ಎನ್‌ಎಸ್‌ಎಸ್ ಸಂಚಾಲಕಿ ಡಾ.ರೇಷ್ಮಾ ಮಾತನಾಡಿ, ರಕ್ತದ ಕೊರತೆ ಇರುವುದನ್ನು ನೋಡುತ್ತಿದ್ದು, ಸಕಾಲದಲ್ಲಿ ರಕ್ತ ಸಿಗದೇ ಜೀವ ಕಳೆದುಕೊಳ್ಳುವ ಸ್ಥಿತಿ ಇರುತ್ತದೆ. ಇಂದು ಡೆಂೆ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದರಿಂದ ರಕ್ತದ ಕೊರತೆ ತುಂಬಾ ಇದೆ. ಈ ನಿಟ್ಟಿನಲ್ಲಿ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಎನ್‌ಎಸ್‌ಎಸ್ ಸಂಚಾಲಕರಾದ ಡಾ. ಸೋಮಶೇಖರ್, ಡಾ. ಸುಧಾಕರ್, ರೆಡ್‌ಕ್ರಾಸ್ ಸಂಚಾಲಕರಾದ ಡಾ. ಎಸ್.ಎಚ್.ಪ್ರಸನ್ನ, ಎಚ್.ಟಿ. ಜಯಕೀರ್ತಿ, ರೋವರ್ಸ್ ಹಾಗೂ ರೇಂಜರ್ಸ್ ವಿಭಾಗದ ಡಾ. ಬಿ.ಎಂ.ಚಂದ್ರಶೇಖರ್, ಕೆ.ಪಿ.ಪವಿತ್ರಾ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಕ್ರಿಯ ನಾಯಕ, ಡಾ. ಪೂರ್ಣಿಮಾ, ಆರ್.ಗಿರೀಶ್, ಧರಣೇಂದ್ರ ದಿನಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net