ರಕ್ತದಾನ, ಅನ್ನಸಂತರ್ಪಣೆ ಏರ್ಪಡಿಸಿ ಪುನೀತ್ ರಾಜಕುಮಾರ ಜನ್ಮ ದಿನಾಚರಣೆ

17-RNR-03
Published on

ರಾಣೆಬೆನ್ನೂರ: ನಗರದ ರೈಲ್ವೆ ನಿಲ್ದಾಣದ ಆಟೋರಿಕ್ಷಾ ಚಾಲಕರ-ಮಾಲಕರ ಸಂಘದ ವತಿಯಿಂದ ರಕ್ತದಾನ ಶಿಬಿರ, ನೇತ್ರದಾನ ವಾಗ್ದಾನ ಹಾಗೂ ಅನ್ನಸಂತರ್ಪಣೆ ಮೂಲಕ ಪುನೀತ್ ರಾಜಕುಮಾರ ಜನ್ಮದಿನ ಆಚರಿಸಲಾಯಿತು.
ನಗರದ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ನೇತ್ರದಾನದ ವಾಗ್ದಾನ ಮಾಡಿದರು. ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಂಘಟನೆಯ ಅಧ್ಯಕ್ಷ ನಾಗರಾಜ ಹಾರೋಗೊಪ್ಪ, ಉಪಾಧ್ಯಕ್ಷ ಮಂಜುನಾಥ ಮಹೇಂದ್ರಕರ, ಪ್ರಮುಖರಾದ ರಮೇಶ, ವಿನಯ, ಚಂದ್ರು, ಚಿಕ್ಕಪ್ಪ, ಉಮೇಶ, ಕರಿಮ, ಮಂಜುನಾಥ, ಮಲ್ಲೇಶ, ಕೃಷ್ಣಪ್ಪ, ಅರುಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net