

ರಾಣೆಬೆನ್ನೂರ: ಯುವ ಜನಾಂಗ ರಕ್ತದಾನ ಮಾಡುವುದರಿಂದ ಮತ್ತೊಬ್ಬರ ದೇಹ ರಕ್ಷಣೆ ಜತೆಗೆ ತಮ್ಮ ದೇಹ ಕೂಡ ಗುಣಮಟ್ಟದ ರಕ್ತ ಸಂಗ್ರಹಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.
ನಗರದ ಬಿಎಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಹಾಗೂ ಹಾವೇರಿ ಜಿಲ್ಲಾ ರಕ್ತ ಕೇಂದ್ರದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ ಜೀವನದಲ್ಲಿ ರಕ್ತದಾನದ ಮಹತ್ವ ಅರಿತು ಸಮಾಜದಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಪ್ರಾಚಾರ್ಯ ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಮಾಡುವುದರಿಂದ ಆಗುವ ಅನುಕೂಲಗಳ ಕುರಿತು ಹಾವೇರಿ ಜಿಲ್ಲಾ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಉಪನ್ಯಾಸ ನೀಡಿದರು. 105 ವಿದ್ಯಾಥಿರ್ಗಳ ರಕ್ತ ತಪಾಸಣೆ ಮಾಡಲಾಯಿತು. 23 ವಿದ್ಯಾಥಿರ್ಗಳು ರಕ್ತದಾನ ಮಾಡಿದರು.
ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಕೆ.ಕೆ. ಹಾವಿನಾಳ, ಹಿರಿಯ ತಾಂತ್ರಿಕ ಅಧಿಕಾರಿ ಬಸವರಾಜ ಕಮತದ, ಪ್ರಮುಖರಾದ ಸಂತೋಷ ನಲ್ಲಿಕೊಪ್ಪ, ಸುಮಾ ಲಮಾಣಿ, ಡಾ. ಚಂದ್ರಶೇಖರ ಎಂ.ಕೆ., ಡಾ. ದೇವರಾಜ ಹಂಚಿನಮನಿ, ರಿಯಾನಾಬಾನು ದೊಡ್ಡಮನಿ, ಕಾವ್ಯಾ ಹುಲ್ಲತ್ತಿ ಮತ್ತಿತರರು ಉಪಸ್ಥಿತರಿದ್ದರು.