

ಬೆಂಗಳೂರು: ‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಮತ್ತು ನಟಿ ಚೈತ್ರಾ ಜೆ.ಆಚಾರ್ ಅಭಿನಯದ ಸೈನ್ಸ್ ಫಿಕ್ಷನ್ ‘ಬ್ಲಿಂಕ್’ ಚಿತ್ರದ ಮೊದಲ ಸಾಂಗ್ ‘ಆಗಂತುಕ’ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ರ್‍ಯಾಪ್ ವರ್ಶನ್ ಜತೆಗೆ ಚಿತ್ರದ ಕೆಲ ಸೀನ್ಗಳನ್ನು ಚಿತ್ರ ತಯಾರಕರು ಹಾಡಿನಲ್ಲಿ ತೋರಿಸಿದ್ದು, ಸೈ-ಫೈ ಫಿಲಂ ಬಗ್ಗೆ ಇದೀಗ ಈ ಹಿಂದೆಯಿದ್ದ ನಿರೀಕ್ಷೆಗಳು ಈಗ ಮತ್ತಷ್ಟು ಹೆಚ್ಚಿದೆ.
ಇಂದು ಬ್ಲಿಂಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸೈನ್ಸ್-ಫಿಕ್ಷನ್ ಆಧರಿತ ಕಥೆಯನ್ನು ಚಿತ್ರತಂಡ ಉತ್ತಮವಾಗಿ ಕಟ್ಟಿಕೊಟ್ಟಿರುವುದು ವಿಡಿಯೋದಲ್ಲಿ ಕಾಣಬಹುದು. ಬಹುನಿರೀಕ್ಷಿತ ಚಿತ್ರದಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ಇದ್ದು, ಸದ್ಯ ಚಿತ್ರತಂಡದ ಮೇಲೆ ಸಾಕಷ್ಟು ಭರವಸೆ, ಕುತೂಹಲ ಮೂಡಿದೆ.
ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಚಿತ್ರವನ್ನು ರವಿಚಂದ್ರನ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ವಿಶೇಷ ಕಥಾಹಂದರವನ್ನು ಹೊಂದಿದ್ದು, ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ರಂಗಭೂಮಿ ಹಿನ್ನಲೆಯುಳ್ಳ ಕಲಾವಿದನಾಗಿ ಅಭಿನಯಿಸಿದ್ದಾರೆ. ಚಿತ್ರವು ಇದೇ ಮಾರ್ಚ್ 08ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.
ವಜ್ರಧೀರ್ ಜೈನ್, ಸುರೇಶ ಆನಗಳ್ಳಿ, ಚೈತ್ರ ಜೆ.ಆಚಾರ್, ಮಂದಾರ ಬತ್ತಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಇತರ ಕಲಾವಿದರು ನಟಿಸಿದ್ದಾರೆ. ಅವಿನಾಶ ಶಾಸ್ತ್ರಿ ಮತ್ತು ಪ್ರಸನ್ನ ಕುಮಾರ್ ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತವನ್ನು ನಿರ್ವಹಿಸಿದ್ದಾರೆ.