ಬೆಚ್ಚಿ ಬೀಳಿಸ್ತಿದೆ ಬ್ಲೀಡಿಂಗ್ ಐ ವೈರಸ್​; ಎಬೊಲಾ ವೈರಸ್​ನ​ ತಳಿ ಇದು, ಚಿಕಿತ್ಸೆ ಇಲ್ಲ, ಲಕ್ಷಣಗಳು ಏನು? |Bleeding eye virus

eye final
Published on

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತೊಂದು ಮಾರಣಾಂತಿಕ ಕಾಯಿಲೆಯ ಬಗ್ಗೆ ಎಚ್ಚರಿಕೆ ನೀಡಿದೆ. ವಿನಾಶಕಾರಿ ಮಾರ್ಬರ್ಗ್ ವೈರಸ್​ನ ಸೋಂಕು ಹೆಚ್ಚಾಗಿದ್ದು, ಎಚ್ಚೆತ್ತುಕೊಳ್ಳುವಂತೆ ವಾರ್ನಿಂಗ್ ಕೊಟ್ಟಿದೆ.

ಆಫ್ರಿಕನ್ ದೇಶಗಳಾದ ರುವಾಂಡಾ (Rwanda), ತಾಂಝನಿಯಾ (Tanzania), ಘಾನ (Ghana)ದಲ್ಲಿ ಮಾರ್ಬರ್ಗ್​ ಸೋಂಕು ಹರಡುತ್ತಿದೆ. ತ್ತೀಚೆಗಿನ ದಿನಗಳಲ್ಲಿ ಈ ಸೋಂಕಿಗೆ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವೈರಸ್​ ತಗುಲಿದ ರೋಗಿಗಳ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ರಕ್ತಸ್ರಾವ ಆಗುತ್ತಿದೆ. ಅದಕ್ಕಾಗಿ ಇದನ್ನೂ ಬ್ಲೀಡಿಂಗ್ ಐ ವೈರಸ್ (Bleeding Eye Virus) ಎಂದೂ ಕರೆಯಲಾಗುತ್ತೆ.

‘ಬ್ಲೀಡಿಂಗ್ ಐ ವೈರಸ್​’ ಎಬೋಲಾ ವೈರಸ್​ನ ತಳಿಯೇ?

ಇದೊಂದು ಗಂಭೀರವಾದ ಕಾಯಿಲೆ. ಆಫ್ರಿಕಾದಂತಹ ದೇಶಗಳಲ್ಲಿ ಗಣಿಗಾರಿಕೆ ಹೆಚ್ಚಾಗಿರುತ್ತದೆ. ದೀರ್ಘಕಾಲದವರೆಗೆ ಗಣಿ ಅಥವಾ ಗುಹೆಗಳ ಸಂಪರ್ಕದಲ್ಲಿರೋರು ಮೊದಲು ಸೋಂಕಿಗೆ ಒಳಗಾಗುತ್ತಾರೆ. ನಂತರ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಬಾವಲಿಗಳು ವಾಸಿಸುವ ಸ್ಥಳದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಹರಡುವಿಕೆ ಹೇಗೆ?

ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ದೈಹಿಕ ದ್ರವಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣೀರು, ಬೆವರು, ಮಲ, ಮೂತ್ರಗಳಿಂದ ಬರುತ್ತದೆ. ಅಲ್ಲದೇ ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳ ಮೂಲಕವೂ ಇನ್ನೊಬ್ಬರಿಗೆ ಹರಡುತ್ತದೆ. ಅಂದರೆ ಸೋಂಕಿತ ವ್ಯಕ್ತಿಯೊಂದಿಗೆ, ವ್ಯಕ್ತಿ ಬಳಸಿದ ವಸ್ತುಗಳ ಜೊತೆ ನೇರ ಸಂಪರ್ಕ ಮಾಡಿದರೆ ಮಾರ್ಬರ್ಗ್ ವೈರಸ್ ಹರಡುತ್ತದೆ.

ಮಾರ್ಬರ್ಗ್ ವೈರಸ್ ಗುಣ ಲಕ್ಷಣಗಳೇನು?

ವ್ಯಕ್ತಿಯ ದೇಹ ವೈರಸ್​​ ತಗುಲಿದ 21 ದಿನಗಳ ಬಳಿಕ ಹರಡುತ್ತದೆ

ಇದ್ದಕ್ಕಿಂದ್ದಂತೆ ಹುಷಾರು ತಪ್ಪಿಸಿ ದೇಹವನ್ನು ಕಂಟ್ರೋಲ್​ಗೆ ತೆಗೆದುಕೊಳ್ಳುತ್ತದೆ

ತೀವ್ರ ಜ್ವರ ಮತ್ತು ತೀವ್ರ ತಲೆನೋವು ಮೊದಲೆರಡು ದಿನ ಕಾಣಿಸಿಕೊಳ್ಳುತ್ತದೆ

ಅತಿಸಾರ, ಹೊಟ್ಟೆ ನೋವು, ಸ್ನಾಯು ಸೆಳೆತ, ವಾಕರಿಕೆ ಮತ್ತು ವಾಂತಿ ಮೂರನೇ ದಿನ ಕಾಣಿಸಿಕೊಳ್ಳುತ್ತದೆ

ಕೆಲವು ಸಂದರ್ಭಗಳಲ್ಲಿ ಕಣ್ಣುಗಳಿಂದ ರಕ್ತವು ಹೊರಬರುತ್ತದೆ

5 ಮತ್ತು 7 ದಿನಗಳ ನಡುವೆ: ರೋಗದ ಗಂಭೀರತೆ ಮತ್ತಷ್ಟು ಹೆಚ್ಚಾಗುತ್ತ ಹೋಗುತ್ತದೆ. ರಕ್ತಸ್ರಾವ, ಕಣ್ಣುಗಳಲ್ಲಿಯೂ ರಕ್ತ ಹೊರ ಬರುತ್ತದೆ.

8 ರಿಂದ 9 ದಿನಗಳ ಅಂತರದಲ್ಲಿ : ಇಷ್ಟು ದಿನಗಳಲ್ಲಿ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕಿನ ತೀವ್ರತೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net