VIDEO| ಸ್ವರ್ಣ ಮಂದಿರ ಬಳಿ ಬಾಂಬ್​ ಸ್ಪೋಟ; ಹಲವರಿಗೆ ಗಾಯ

bomb blast
Published on

ಅಮೃತಸರ: ಸಿಖ್​ ಸಮುದಾಯದ ಪ್ರಮುಖ ಧಾರ್ಮಿಕ ಕ್ಷೇತ್ರ ಸ್ವರ್ಣ ಮಂದಿರದ ಬಳಿ ಬಾಂಬ್​ ಸ್ಪೋಟವಾಗಿದ್ದು ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕಾಗಮಿಸಿದ ಬಾಂಬ್​ ಸ್ಕ್ವಾಡ್​ ಸ್ಪೋಟಕ್ಕೆ ಸಂಬಂಧಿಸಿದ ವಸ್ತು ಹಾಗೂ ಪುಡಿಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಣ್ಣಪುಟ್ಟ ಗಾಯ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೃತಸರ ಪೊಲೀಸ್​ ಆಯುಕ್ತ ನೌನಿಹಾಲ್​ ಸಿಂಗ್​ ಪ್ರಕರಣದ ಕುರಿತು ಈಗಲೇ ಏನು ಹೇಳಲು ಸಾಧ್ಯವಿಲ್ಲ.

ಸ್ಪೋಟಕ್ಕೆ ಸಂಬಂಧಿಸಿದಂತೆ ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದ ಆರು ಯುವತಿಯರಿಗೆ ಗಾಜಿನ ಚೂರು ತಗುಲಿ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

bomb blast (1)

ವದಂತಿಗೆ ಕಿವಿಗೊಡಬೇಡಿ

ಇನ್ನು ಬಾಂಬ್​ ಸ್ಪೋಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಿ ಬಿಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಯಾರು ಹೆಚ್ಚಿನ ಗಮನ ಹರಿಸಬೇಡಿ ಎಂದು ಪಂಜಾಬ್​ ಪೊಲೀಸರು ಟ್ವೀಟ್​ ಮಾಡಿ ವಿನಂತಿಸಿದ್ಧಾರೆ.

ಇನ್ಉ ಸ್ಪೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪೊಲೀಸರು ಸ್ಪೋಟದ ಕುರಿತು ನಿಖರ ಕಾರಣ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net