

ಕೋಲಾರ: ಅಭಿವೃದ್ಧಿ ಕೆಲಸಗಳ ಟೆಂಡರ್ ಪಡೆದುಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಂತಹ ಗುತ್ತಿಗೆದಾರರನ್ನು ಕಪು$್ಪಪಟ್ಟಿಗೆ ಸೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಮಾತನಾಡಿದರು.
ಅನುದಾನಕ್ಕೇನೂ ಕೊರತೆಯಿಲ್ಲ. ಟೆಂಡರ್ ಪಡೆದುಕೊಂಡು ಕೆಲಸ ವಿಳಂಬ ಮಾಡಿದರೆ ಏನರ್ಥ, ರಸ್ತೆ, ಚರಂಡಿ ಹಗೆದು ಹಾಗೆ ಬಿಟ್ಟರೆ ಜನ ಸುಮ್ಮನಿರುವುದಿಲ್ಲ, ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಆರ್ಡಿಪಿಆರ್ ಇಲಾಖೆಗೆ 25 ಕೋಟಿ ರೂ. ಬಿಡುಗಡೆ ಮಾಡಿ 8 ತಿಂಗಳು ಕಳೆದಿದೆ. ಇದುವರೆಗೂ ಟೆಂಡರ್ ಸಹ ಕರೆದಿಲ್ಲ. ಅಧಿಕಾರಿಗಳ ಕೈಯಲ್ಲಿ ಆಗಿಲ್ಲ ಅಂದರೆ ಹೇಳಲಿ ಲ್ಯಾಂಡ್ ಆರ್ಮಿಗೆ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಅಧಿಕಾರಿಗಳು ಮಾಡುವ ಕೆಲಸಗಳಿಗೆ ವಿರೋಧ ಪಕ್ಷದವರ ಆರೋಪಕ್ಕೆ ಒಳಗಾಗಿದ್ದೇವೆ. ಅವರ ಕಾಲದಲ್ಲಿ ಕೊಟ್ಟಿರುವ ದುಡ್ಡಿಗೆ ನಾನು ಭೂಮಿಪೂಜೆ ಮಾಡುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ. ಇದೆಲ್ಲ ನಮಗೆ ಬೇಕಾ ಎಂದು ಗರಂ ಆದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲು ಅಧಿಕಾರಿಗಳು ಕಾದು ಕುಳಿತಿದ್ದಾರೆ. ಇದನ್ನು ತುರ್ತು ಕೆಲಸ ಎಂದು ಪರಿಗಣಿಸಿ ಮುಚ್ಚಿಸುವ ಕೆಲಸ ಮಾಡಬೇಕು, ಶ್ರೀನಿವಾಸಪುರ ಭಾಗದ ಗಡಿಯಲ್ಲಿ ಈ ಪರಿಸ್ಥಿತಿ ಇದೆ ಎಂದು ಸಭೆ ಗಮನಕ್ಕೆ ತಂದರು.
ತಾಲೂಕು ವ್ಯಾಪ್ತಿಗೆ 22 ಕಿಮಿ ರಸ್ತೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ ಬೇರೆ ತಾಲೂಕಿಗೆ 30 ಕಿಮಿ ಗುರುತಿಸಿದ್ದಾರೆ. ಈ ತಾರತಮ್ಯ ಸರಿಪಡಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂಎಲ್ಸಿ ಅನಿಲ್ ಕುಮಾರ್ ಕುಮಾರ್ ಮಾತನಾಡಿ, ರಿಂಗ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು 30 ಲಕ್ಷಕ್ಕೆ ಇಲಾಖೆಯವರು ಪ್ರಸ್ತಾವ ಸಲ್ಲಿಸಿದ್ದಾರೆ. ಇದಕ್ಕೆ 3 ಕೋಟಿ ರೂ. ವೆಚ್ಚವಾಗಲಿದ್ದು ಸರ್ಕಾರದಿಂದ ಮಂಜೂರು ಮಾಡಿಸಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ಸುರೇಶ್ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕ್ರೂಪ್ಕೌರ್, ಜಿಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಕೋಲಾರ ಎಸ್ಪಿ ಬಿ.ನಿಖಿಲ್, ಕೆಜಿಎ್ ಎಸ್ಪಿ ಶಾಂತರಾಜು, ಡಿಸಿಎ್ ಸರೀನಾ ಸಿಕ್ಕಲಿಗರ್ ಇದ್ದರು.
* ಪುನಃ ದೂರುಗಳು
ಯಾವುದೇ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಸಂಪರ್ಕಿಸುವುದಿಲ್ಲ. ಲಾನುಭವಿಗಳ ಆಯ್ಕೆ ಕುರಿತು, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವುದಿಲ್ಲ. ವಿಶೇಷವಾಗಿ ಜಿಲ್ಲೆಗೆ ಡಿಡಿಪಿಐ, ಬಿಇಒ ಬೇಕಾಗಿಲ್ಲ. ಇಂಜಿನಿಯರ್ಗಳು ಕೊಡಬೇಕಾಗಿರುವ ಮಾಹಿತಿ ಇವರಿಂದ ಪಡೆಯಬೇಕೆ. ಸಭೆಗೆ ಶಾಲೆ, ಶಿಕ್ಷಕರು, ಮಕ್ಕಳು, ಲಿತಾಂಶದ ಬಗ್ಗೆ ಮಾಹಿತಿ ನೀಡಿಲ್ಲ, ಶಿಷ್ಟಾಚಾರ ಉಲ್ಲಂನೆ ಕುರಿತು ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು.
* ಜನಪ್ರತಿನಿಧಿಗಳ ಗಮನಕ್ಕೆ ತನ್ನಿ
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಮಾತನಾಡಿ, ರೈತರಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಇದ್ದ ನಿಯಮಗಳನ್ನು ಸಡಲೀಕರಣಗೊಳಿಸಿದ್ದು ಅರ್ಜಿ ಸಲ್ಲಿಸುವ ರೈತರಿಗೆ ಪ್ರಯೋಜನ ತಲುಪಿಸಲಾಗುವುದು. ಕೇಂದ್ರ, ರಾಜ್ಯ ಯೋಜನೆಗಳಡಿ ಆನ್ಲೈನ್ ಅರ್ಜಿ ಪಡೆದು ಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅರಿವು ಮೂಡಿಸುತ್ತಿಲ್ಲ. ಆನ್ಲೈನ್ ವ್ಯವಸ್ಥೆಬಹಳ ಉತ್ತಮವಾದದು. ಸಿಟಿ ಕ್ಷೇತ್ರದಲ್ಲಿ ತಳ್ಳೊಗಾಡಿ, ನೇಮಕಾತಿ ಪತ್ರ ವಿತರಣೆ, ಟ್ಯಾಕ್ಸಿ ವಿತರಣೆ ಮಾಡಿದರೂ ಸಹ ಅಧಿಕಾರಿಗಳು ಗಮನಕ್ಕೆ ತರುತ್ತಾರೆ. ಆದರೆ ಕೋಲಾರದಲ್ಲಿ ಮಾಹಿತಿ ಕೊಡೊ ಪ್ರಯತ್ನ ಮಾಡುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.
ಶಾಸಕಿ ರೂಪಕಲಾ ಮಾತನಾಡಿ, ಹಳ್ಳಿಗಳ್ಳಿ ಕುಂದುಕರೆತಗಳ ಸಭೆ ಮಾಡಿದಾಗ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಸಮರ್ಪಕ ಮಾಹಿತಿ ನೀಡಿದರೆ ಪ್ರಗತಿ ಕಾಣಬಹುದು ಎಂದು ಸಲಹೆ ನೀಡಿದರು.
* ಕಾಯ್ದೆ ರೂಪಿಸಲು ಕ್ರಮ
ನರ್ಸರಿಗಳನ್ನು ಕಾಯ್ದೆಯಡಿಗೆ ತರಬೇಕು ಎಂದು ಜಿಲ್ಲೆಯಿಂದ ಪ್ರಯತ್ನ ನಡೆದಿದ್ದು, ಈ ಬಗ್ಗೆ ಚರ್ಚೆಯೂ ಆಗಿದೆ. ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಹೇಳಿದರು. ಸಚಿವ ಸುರೇಶ್ ಮಾತನಾಡಿ, ನರ್ಸರಿಗಳನ್ನು ಕಾಯ್ದೆಯಡಿ ಸೇರಿಸಬೇಕು ಅಂತ ಜಿಲ್ಲೆಯಿಂದ ಕೂಗು ಎದ್ದಿದ್ದು, ಸದನದಲ್ಲಿ ಅನುಮೋದನೆ ಪಡೆದು ರಾಜ್ಯಾದ್ಯಂತ ವಿಸ್ತರಿಸಲು ಕ್ರಮವಹಿಸಲಾಗುವುದು ತಿಳಿಸಿದರು.
* ಖರೀದಿ ದರ ನಿಗದಿಗೆ ಆದೇಶ
ಸರ್ಕಾರವು ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡುತ್ತಿದ್ದಂತೆ ಮಂಡಿ ಮಾಲೀಕರು ಖರೀದಿ ದರ ಕಡಿಮೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಕಾರ್ಯದರ್ಶಿಗಳು ಈ ಬಗ್ಗೆ ಗಮನ ಹರಿಸಿ ಮಂಡಿ ಹಾಗೂ ್ಯಾಕ್ಟರಿ ಮಾಲೀಕರು ಖರೀದಿ ಮಾಡಲು ದರ ನಿಗದಿ ಮಾಡಬೇಕು. ರೈತರು ಯಾರು ಮೋಸ ಮಾಡುವುದಿಲ್ಲ. ಅವರ ಸಂಕಷ್ಟಕ್ಕೆ ನಿಲ್ಲಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಬೆಂಬಲ ಬೆಲೆ ನೀಡಲು 101 ಕೋಟಿ ರೂ. ಹಣವಿದೆ. ಇನ್ನು ಹೆಚ್ಚಿಗೆ ಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ ಎಂದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಆದೇಶಿಸಲಾಗುವುದು ಎಂದು ಬೈರತಿ ಸುರೇಶ್ ಭರವಸೆ ನೀಡಿದರು.
* ಮಾಲೂರು ಹೊರತುಪಡಿಸಿ ಪರವಾನಗಿ ನೀಡಿ
ಜಿಲ್ಲೆಯಲ್ಲಿ ಈಗಾಗಲೇ 45 ಕಲ್ಲು ಗಣಿಗಳು ನಡೆಯುತ್ತಿದ್ದು, ಮಾಲೂರು ಬಿಟ್ಟು, ಯಾವುದೇ ತಾಲೂಕು ವ್ಯಾಪ್ತಿಯಲ್ಲಿ ಬಿ&1 ಪರವಾನಗಿ ನೀಡಿ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಡಾ.ಎಂ.ಆರ್.ರವಿ, ಗಣಿಯ ಮಟ್ಟವನ್ನು ನೋಡಿಕೊಂಡು ಕ್ರಮತೆಗೆದುಕೊಳ್ಳಲಾಗುವುದು. ಈಗಾಗಲೇ ಕೆಲ ಮಂದಿ ಇದೇ ಜಾಗದಲ್ಲಿ ಅನುಮತಿ ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ, ಕೊಡದಿದ್ದರೆ ಕೋರ್ಟ್ಗೆ ಹೋಗುತ್ತಾರೆ ಎಂದರು.
ಜಿಲ್ಲಾಧಿಕಾರಿ ಆದವರು ಏನು ಬೇಕಾದರು ಮಾಡಬಹುದು. ಕೋರ್ಟ್ಗೆ ಹೋದರೆ ಪ್ರತಿಕ್ರಿಯೆ ಕೊಡಬಹುದು ಎಂದು ಶಾಸಕ ನಂಜೇಗೌಡ ತಿಳಿಸಿದರು.
* ಸಿಎಸ್ಗಳ ಹಂತದಲ್ಲಿ ಬಾಕಿ
ಯಾವು ಅಭಿವೃದ್ಧಿ ಕೆಲಸದ ಕಡತಗಳು ವಿಲೇವಾರಿ ಆಗಿ ರಾಜ್ಯಕ್ಕೆ ಕಳುಹಿಸಿಕೊಟ್ಟರೆ ಸಿಎಸ್ಗಳು ವಿನಾಕಾರಣ ಬಾಕಿ ಇರಿಸಿಕೊಳ್ಳುತ್ತಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳು ನಮ್ಮ ಗಮನಕ್ಕೆ ತಂದರೆ ಸಂಬಂಧಪಟ್ಟ ಸಚಿವರ ಬಳಿ ಕುಳಿತುಕೊಂಡು ಕೆಲಸ ಮಾಡಿಸಿಕೊಂಡು ಬರುತ್ತೇವೆ ಎಂದರು.