ರಾಜ್ಯದಲ್ಲಿ ಈವರೆಗೆ 39 ಮಂದಿ ಬ್ಲ್ಯಾಕ್​ ಫಂಗಸ್​ಗೆ ಬಲಿ; ಸಾವಿರಕ್ಕೂ ಹೆಚ್ಚಾಗಿದೆ ಪ್ರಕರಣ

black
Published on

ಬೆಂಗಳೂರು: ರಾಜ್ಯದಲ್ಲಿನ ಬ್ಲ್ಯಾಕ್​ ಫಂಗಸ್​ಗೆ ಈವರೆಗೆ 39 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಬ್ಲ್ಯಾಕ್​ ಫಂಗಸ್​ ಪ್ರಕರಣಗಳ ಕುರಿತಾಗಿ ಮಾಹಿತಿ ಬಿಡುಗಡೆ ಮಾಡಲಾಗಿದೆ.

ಈವರೆಗೆ ಒಟ್ಟಾರೆಯಾಗಿ 1250 ಮಂದಿಯಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ. ಅತಿ ಹೆಚ್ಚು ಅಂದರೆ 521 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಉಳಿದಂತೆ ಧಾರವಾಡದಲ್ಲಿ 119, ಕಲಬುರಗಿ 102, ಬಾಗಲಕೋಟೆ 68, ವಿಜಯಪುರ 57, ಕೋಲಾರ‌ 42, ಶಿವಮೊಗ್ಗ 38, ರಾಯಚೂರು 36, ಬೆಳಗಾವಿ 35 ಮತ್ತು ಮೈಸೂರಿನಲ್ಲಿ 35 ಪ್ರಕರಣಗಳು ದೃಢವಾಗಿವೆ. ರಾಜ್ಯದ 28 ಜಿಲ್ಲೆಗಳಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ ಎಂದು ತಿಳಿಸಲಾಗಿದೆ.

ಒಟ್ಟಾರೆ ಪ್ರಕರಣಗಳಲ್ಲಿ ಕೇವಲ 18 ಮಂದಿ ಗುಣಮುಖರಾಗಿದ್ದಾರೆ. ಉಳಿದ 1193 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net