ಬಿಜೆಪಿಯ ಹಿರಿಯ ನಾಯಕ ಕೈಲಾಶ್​ ಸಾರಂಗ್​ ವಿಧಿವಶ: ಪ್ರಧಾನಿ ಮೋದಿ ಸಂತಾಪ

Kailash
Published on

ಬುಲಂದ್​ಶಹರ್​: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್​ ಸಾರಂಗ್ (85) ಶನಿವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೈಲಾಶ್​ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ 12 ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಮೃತರು ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೈಲಾಶ್​ ಅವರ ಮಗ ವಿಶ್ವಾಸ್​ ಸಾರಂಗ್​ ಮಧ್ಯಪ್ರದೇಶ ಸರ್ಕಾರ ಸಚಿವರಾಗಿದ್ದಾರೆ.

ಕೈಲಾಶ್​ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಕೈಲಾಶ್​ ಸಾರಂಗ್​ ಜೀ ಅವರು ಅವಿರತ ಶ್ರಮ ವಹಿಸಿದ್ದರು. ಮಧ್ಯಪ್ರದೇಶದ ಏಳಿಗೆಗೆ ಸಹಾನುಭೂತಿ ಮತ್ತು ಕಠಿಣ ಕೆಲಸ ಮಾಡುವ ನಾಯಕರಾಗಿಯೇ ನಮ್ಮ ನಡುವೆ ಅವರು ಉಳಿಯಲ್ಲಿದ್ದಾರೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಕುಟುಂಬ ಹಾಗೂ ಬಂಧುಬಳಗದವರಿಗೆ ಓಂ ಶಾಂತಿ ಎನ್ನುವ ಮೂಲಕ ಪ್ರಧಾನಿ ಮೋದಿ ಸಾಂತ್ವಾನ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net