ಬಿಜೆಪಿಗರದ್ದು ಚುನಾವಣೆ ಗಿಮಿಕ್: ಸುಂದರೇಶ್ ಟೀಕೆ

rama pooje
ಎಚ್.ಎಸ್.ಸುಂದರೇಶ್ ಶಿವಮೊಗ್ಗ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ಕವಿತಾ ರಾಘವೇಂದ್ರ, ಎನ್.ಡಿ.ಪ್ರವೀಣ್‌ಕುಮಾರ್, ನಾಜೀಮಾ, ಸ್ಟೆಲ್ಲಾ ಮಾರ್ಟಿನ್, ಚಂದ್ರಭೂಪಾಲ ಇತರರಿದ್ದರು.
Published on

ಶಿವಮೊಗ್ಗ: ಬಿಜೆಪಿಯವರು ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ. ಆದರೆ ನಾವು ಭಕ್ತಿಯಿಂದ ರಾಮನ ಆರಾಧನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ನಮಗೆ ಭಕ್ತಿಯಾದರೆ, ಬಿಜೆಪಿಯವರಿಗೆ ಚುನಾವಣೆ ಪಾಲಿನ ಶಕ್ತಿ. ಅವರದ್ದು ಚುನಾವಣೆ ಗಿಮಿಕ್ ಹೊರತು ದೈವ ಶ್ರದ್ಧೆಯಲ್ಲ ಎಂದು ಟೀಕಿಸಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರಕ್ಕೆ ಟ್ರಸ್ಟ್ ಮೂಲಕ ಚಂದಾ ಸಂಗ್ರಹ ಮಾಡಲಾಗಿದೆ. ಇದರಿಂದ ದೇವಾಲಯ ತಲೆ ಎತ್ತಿ ನಿಂತಿದೆಯೇ ಹೊರತು ಬಿಜೆಪಿಯಿಂದಲ್ಲ. ರಾಮ ಎಲ್ಲರ ಹೃದಯದಲ್ಲಿದ್ದಾನೆ. ಬಿಜೆಪಿಯವರು ರಾಮನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್‌ನಿಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಪ್ರಮುಖರಾದ ಚಂದ್ರಭೂಪಾಲ, ಎನ್.ಡಿ.ಪ್ರವೀಣ್ ಕುಮಾರ್, ನಾಜೀಮಾ, ಕವಿತಾ ರಾಘವೇಂದ್ರ, ಸ್ಟೆಲ್ಲಾ ಮಾರ್ಟಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net