ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಮೇಲೆ ಉಗ್ರರ ಗುಂಡಿನ ದಾಳಿ...

Shoot 4 Jul 20
Published on

ಶ್ರೀನಗರ: ಜಮ್ಮು-ಕಾಶ್ಮೀರದ ಬುಡ್​ಗಾಮ್​​ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನೋರ್ವನಿಗೆ ಉಗ್ರರು ಗುಂಡು ಹಾರಿಸಿದ್ದಾರೆ. ಬಿಜೆಪಿ ಮುಖಂಡ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬ್ದುಲ್ ಹಮೀದ್ ನಜರ್​ ಎಂಬುವರು ಉಗ್ರರ ಗುಂಡೇಟಿನಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತ. ಇವರು ಮಧ್ಯಕಾಶ್ಮೀರದ ಬುಡ್​​ಗಾಮ್​​ನ ಮೊಹಿಯುಂದ್​ಪೋರಾ ನಿವಾಸಿ. ಇಂದು ಮುಂಜಾನೆ ಘಟನೆ ನಡೆದಿದೆ.

ನಜರ್​ ಅವರು ಬಿಜೆಪಿ ಇತರ ಹಿಂದುಳಿದ ವರ್ಗ ಮೋರ್ಚಾದ ಬುಡ್​ಗಾಮ್​ ಜಿಲ್ಲಾಧ್ಯಕ್ಷ. ಬಿಜೆಪಿ ನಾಯಕರ ಮೇಲೆ ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ಪದೇಪದೆ ದಾಳಿಯಾಗುತ್ತಿದೆ. ಉಗ್ರರ ಗುಂಡೇಟಿನಿಂದ ಗಾಯಗೊಂಡ ಮೂರನೇ ಬಿಜೆಪಿ ಲೀಡರ್​ ಇವರಾಗಿದ್ದಾರೆ.

ಇನ್ನೊಂದೆಡೆ ಕುಲ್​ಗಾಂವ್​​ನಲ್ಲಿ ಕೂಡ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net