ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

pic rape
Published on

ಮುಂಬೈ: ಮುಂಬೈನ ಮಹಿಳಾ ಬಿಜೆಪಿ ಕಾರ್ಯಕರ್ತರೊಬ್ಬರು ಪಕ್ಷದ ಮತ್ತೊಬ್ಬ ಕಾರ್ಯಕರ್ತರು ಬೋರಿವಿಲಿಯಲ್ಲಿರುವ ಬಿಜೆಪಿ ನಾಯಕರ ಕಾರ್ಯಾಲಯದಲ್ಲಿ ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದುಷ್ಕೃತ್ಯವು ಆಗಸ್ಟ್​ 15 ರಂದು ನಡೆದಿತ್ತು ಎನ್ನಲಾಗಿದ್ದು, ಮಹಿಳೆಯು ಬುಧವಾರ ನೀಡಿದ ದೂರಿನ ಮೇಲೆ ಬೋರಿವಿಲಿ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂಬೈ ಮೇಯರ್​ ಹಾಗೂ ಶಿವಸೇನಾ ನಾಯಕಿ ಕಿಶೋರಿ ಪೆಡ್ನೇಕರ್​ ಅವರು ಸಂತ್ರಸ್ತೆಯನ್ನು ಮತ್ತು ಪೊಲೀಸ್​ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರ ಮಾಡುವುದಾಗಿ ಹೇಳಿದ್ದಾರೆ. "ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ?" ಎಂದು ಪ್ರಶ್ನಿಸಿರುವ ಪೆಡ್ನೆಕರ್​, ಸಂತ್ರಸ್ತೆಯು ಬಿಜೆಪಿಯ ಶಾಸಕರು ಮತ್ತು ಸಂಸದರ ಸಹಾಯ ಕೇಳಿದ್ದಾಳೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net