ಜೆಪಿ ನಡ್ಡಾ ನಾಯಕತ್ವದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ, ವಿಸ್ತರಿಸಲಿದೆ ಎಂದ ಅಮಿತ್ ಷಾ

JP Nadda BJP National President 1 20 JAN 20
Published on

ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ನಿಕಟಪೂರ್ವ ಅಧ್ಯಕ್ಷ, ಕೇಂದ್ರ ಸಚಿವ ಅಮಿತ್ ಷಾ ಅಧಿಕಾರ ಹಸ್ತಾಂತರಿಸಿದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆ ಬಳಿಕ ಟ್ವೀಟ್ ಮಾಡಿದ ಅಮಿತ್ ಷಾ ಅವರು, ನಡ್ಡಾ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗಿ, ವಿಸ್ತಾರವಾಗಿ ಬೆಳೆಯಲಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಹಾರೈಸಿದ್ದಾರೆ.

ಸರಣಿ ಟ್ವೀಟ್​ ಮಾಡಿರುವ ಅವರು, ನಡ್ಡಾ ಅವರ ಸಂಘಟನಾ ಕೌಶಲಗಳು ಪಕ್ಷ ಸಂಘಟನೆಗೆ ಸಹಕಾರಿ. ಹೊಸ ಎತ್ತರಕ್ಕೆ ಪಕ್ಷ ತಲುಪಲಿದೆ. ದಾಖಲೆಗಳನ್ನೂ ಬರೆಯಲಿದೆ. ಎಲ್ಲ ಕಾರ್ಯಕರ್ತರೂ ಸಂಘಟನೆ ಬಲಪಡಿಸುವ ಹಾದಿಯಲ್ಲಿ ನಡ್ಡಾ ಅವರಿಗೆ ನೆರವಾಗಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡುವುದಕ್ಕೆ ನನಗೆ ಅವಕಾಶ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net