ಬಿಜೆಪಿ ಮೂರು ಬಾಗಿಲಾದರೆ, ಕಾಂಗ್ರೆಸ್​ನವರದ್ದು ಊರೆಲ್ಲ ಬಾಗಿಲು

8-RNR-01B
Published on

ರಾಣೆಬೆನ್ನೂರ: ಬಿಜೆಪಿ ಒಡೆದ ಮನೆ, ಮೂರು ಬಾಗಿಲು ಎಂದು ಹೇಳುತ್ತಿರುವ ಕಾಂಗ್ರೆಸ್​ನವರಿಗೆ ತಿರುಗೇಟು ನೀಡಿದ ಆರ್​. ಅಶೋಕ, ನಮ್ಮದು ಮನೆಯೊಂದು, ಮೂರು ಬಾಗಿಲು ಆಗಿದ್ದರೆ ಕಾಂಗ್ರೆಸ್​ನವರದ್ದು ಊರೇಲ್ಲ ಬಾಗಿಲು ಆಗಿ ಬಿಟ್ಟಿದೆ ಎಂದು ಲೇವಡಿ ಮಾಡಿದರು.

ತಾಲೂಕಿನ ಚಳಗೇರಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ನನಗೆ ಅಗ್ರಿಮೆಂಟ್​ ಪ್ರಕಾರ ಕೊಡಬೇಕು ಅಂತಾ ಹೇಳಿದ್ದಾರೆ. ಪರಮೇಶ್ವರ ನಾವೇನೂ ಕಡಲೆಕಾಯಿ ತಿನ್ನೋಕೆ ಪಾಟಿರ್ಯಲ್ಲಿ ಇದ್ದೇವಾ ಅಂತಾ ಕೇಳಿದ್ದಾರೆ. ಕೆ.ಎಚ್​. ಮುನಿಯಪ್ಪ ಅಗ್ರಿಮೆಂಟ್​ ಪ್ರಕಾರ ನಡೆದುಕೊಳ್ಳಬೇಕು ಅಂತಾ ಹೇಳಿದ್ದಾರೆ. ಕೃಷ್ಣ ಭೈರೇಗೌಡ ಯಾರ್ಯಾರ ಹಣೆಬರಹ ಏನೇನು ಇರುತ್ತೋ ಅದು ಆಕೈತಿ ಅಂದಾರೆ. ಸಿದ್ದರಾಮಯ್ಯ ಇದು ನಮ್ಮದು ಕೊನೆಯ ಅಂತ್ಯ ಅಂತಾ ಹೇಳುತ್ತಿದ್ದಾರೆ. ಹೀಗಾಗಿ ಅವರ ಬಾಗಿಲು ಊರೇಲ್ಲ ತೆಗೆದುಕೊಂಡಂತೆ ಕಾಯ್ತು ಅಲ್ವಾ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net